ಜಿಲ್ಲೆ

ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು: ಹನಕೆರೆ ಗೇಟ್ ಬಳಿ ಅವಘಡ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಹನಕೆರೆ ಗೇಟ್‌ನಲ್ಲಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುರಿಕೆಂಪನದೊಡ್ಡಿ ಗ್ರಾಮದ ಸಿದ್ದರಾಮು ಅವರ ಪುತ್ರ ಸೃಜನ್(21) ಮೃತ. ದೇವರಹಳ್ಳಿ ಗ್ರಾಮದ ನಾಗರಾಜು ಅವರ ಪುತ್ರ ಆಕಾಶ್ ಹಾಗೂ ಮತ್ತೊಂದು ಬೈಕ್‌ನ ಸವಾರ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೃಜನ್ ಮತ್ತು ಆಕಾಶ್ ಅಂಕಪಟ್ಟಿ ಪಡೆಯಲು ಬಂದು ವಾಪಸಾಗುವ ಅಪಘಾತ ಸಂಭವಿಸಿದೆ. ಪ್ರವೀಣ್‌ನನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.