ಜಿಲ್ಲೆ

ಈಜುಕೊಳವೆಂದು ಎಸ್​ಟಿಪಿಗೆ ಧುಮುಕಿದ ವಿದ್ಯಾರ್ಥಿಗಳು; ಒಬ್ಬ ಸಾವು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರು..

Webdesk - Ravikanth

ಆನೇಕಲ್: ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್​ಟಿಪಿ)ದ ಒಳಗೆ ಬಿದ್ದ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಗಳೂರು ದಕ್ಷಿಣದ ಸೂರ್ಯಸಿಟಿಯಲ್ಲಿ ಈ ಅವಘಡ ಉಂಟಾಗಿದೆ.

ಬೆಂಗಳೂರು ದಕ್ಷಿಣದ ಸೂರ್ಯಸಿಟಿ ಎರಡನೇ ಹಂತಕ್ಕೆ ಹೊಂದಿಕೊಂಡಿರುವ ದ್ವಾರಕನಾಥ್ ಬಡಾವಣೆಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕವು ತೆರೆದ ಸ್ಥಿತಿಯಲ್ಲಿತ್ತು. ಇದನ್ನು ಈಜುಕೊಳವೆಂದು ಭಾವಿಸಿದ ವಿದ್ಯಾರ್ಥಿಗಳು ಈಜಲು ಹೋಗಿ ಸಾವಿಗೀಡಾಗಿದ್ದಾರೆ.

ಈ ಸಂದರ್ಭದಲ್ಲಿ ವರುಣ್ ಕುಮಾರ್ (18) ವರ್ಷ ಸಾವಿಗೀಡಾಗಿದ್ದಾನೆ. ಆನೇಕಲ್​ನ ಅಕ್ಷರ ಫೌಂಡೇಷನ್​ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಈ ಅವಘಡಕ್ಕೆ ಸಂಬಂಧಿಸಿದಂತೆ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.