ಜಿಲ್ಲೆ

ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Dakshina Kannada

ಸುಳ್ಯ: ಆರಂಬೂರಿನ ಬಳಿ ಭಾನುವಾರ ಸ್ನಾನಕ್ಕೆಂದು ನದಿಗೆ ತೆರಳಿದ್ದ ವೇದ ಪಾಠಶಾಲೆಯ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪುತ್ತೂರಿನ ಕೌಡಿಚ್ಚಾರು ಬಳಿಯ ದರ್ಬೆತಡ್ಕ ನಿವಾಸಿ ಮಾವಿನಡಿ ಮನೆ ಗೋಪಾಲಕೃಷ್ಣ ಭಟ್ ಎಂಬುವರ ಪುತ್ರ ಉದನೇಶ್ವರ ಭಟ್(18) ಮೃತಪಟ್ಟವರು. ಉದನೇಶ್ವರ ಅರಂಬೂರಿನ ಭಾರದ್ವಾಜ ಆಶ್ರಮದಲ್ಲಿ ವೇದಾಧ್ಯಯನಕ್ಕೆ ಬಂದಿದ್ದು, ಸಹಪಾಠಿಗಳೊಂದಿಗೆ ಸನಿಹದ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ಹೋಗಿದ್ದಾಗ ಕಾಲು ಜಾರಿ ನೀರಲ್ಲಿ ಮುಳುಗಿದ್ದರು ಎನ್ನಲಾಗಿದೆ.