ಕುಶಾಲನಗರ
ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ವಿದ್ಯಾರ್ಥಿ ಪರಿಷತ್ ಪದಗ್ರಹಣ ಕಾರ್ಯಕ್ರಮ ಶನಿವಾರ ನಡೆಯಿತು. ಪ್ರಾಂಶುಪಾಲ ಪ್ರೊ. ಹೆಚ್. ಬಿ. ಲಿಂಗಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅನುಗ್ರಹ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಎಸ್.ಕೆ. ಸತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಹಲವು ಸ್ಫೂರ್ತಿದಾಯಕ ಕತೆಗಳನ್ನು ಹೇಳುವ ಮೂಲಕ ಹುರಿದುಂಬಿಸಿದರು.
ವೇದಿಕೆಯಲ್ಲಿ ಮುಜರಾಯಿ ಇಲಾಖೆ ನಿವೃತ್ತ ವ್ಯವಸ್ಥಾಪಕ ಎಸ್.ಎಸ್. ಸಂಪತ್ ಕುಮಾರ್, ಪ್ರಮುಖರಾದ ಶೋಭಾ ಸತೀಶ್, ಶ್ಯಾಮಲಾ ನಾಗೇಂದ್ರ ಬಾಬು, ಉಪನ್ಯಾಸಕಿಯರಾದ ಹರ್ಷಿತಾ, ಲೀಲಾಕುಮಾರಿ ತೊಡಿಕಾನ, ಶ್ವೇತಾ, ನೌಷಾದ್ ಇದ್ದರು.