ಸುರೇಶ್ (22) 
ಜಿಲ್ಲೆ

ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

ಅಭಿನಯ್ ಎಚ್.ಎಂ

ಕೆ.ಆರ್.ಸಾಗರ: ಹುಲಿಕರೆ- ಕೆ.ಆರ್.ಸಾಗರ ಮುಖ್ಯ ರಸ್ತೆಯಲ್ಲಿರುವ ಜುವಾರಿ ಅಡ್ವಂಟೆಜ್ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಬಿ.ಇ ಅಂತಿಮ ವರ್ಷದ ವಿದ್ಯಾರ್ಥಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪೇಪರ್ ಮಿಲ್ ಕಾಲನಿ ನಿವಾಸಿ ಮಹದೇವ ಅವರ ಪುತ್ರ ಸುರೇಶ್ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಅಪಾರ್ಟ್‌ಮೆಂಟ್‌ನಲ್ಲಿ ಸುರೇಶ್ ಸಂಬಂಧಿಕರು ದಿನಸಿ ಅಂಗಡಿ ಇಟ್ಟಿದ್ದು, ಅಲ್ಲಿ ಈತ ಡೆಲಿವರಿ ಬಾಯ್ಯಾಗಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ. ಓದುವುದರಲ್ಲಿ ಬುದ್ಧಿವಂತನಾಗಿದ್ದು, ಸಂತೋಷದಿಂದ ಇದ್ದ. ಆದರೆ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದು ತಿಳಿದಿಲ್ಲ ಎಂದು ಮೃತನ ಪಾಲಕರು ಕಳವಳ ವ್ಯಕ್ತವಡಿಸಿದ್ದಾರೆ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.