ಹುಬ್ಬಳ್ಳಿ: ಹೈಕ್ವಾಲಿಟಿಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ. 30ರಷ್ಟು ಲಾಭ ಕೊಡುವುದಾಗಿ ನಂಬಿಸಿದ ವಂಚಕರು, ನಗರದ ವಿದ್ಯಾರ್ಥಿಯೊಬ್ಬರಿಂದ ಬರೋಬ್ಬರಿ 10.30 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ನಗರದ ಹನುಮಂತ ಕೆ. ವಂಚನೆಗೆ ಒಳಗಾದ ವಿದ್ಯಾರ್ಥಿ. ಕಾರ್ತಿಕ್, ಸಾಕ್ಷಿ ಎಂಬುವವರು ವಂಚಿಸಿದ್ದಾರೆ. ಹೂಡಿಕೆ ಹೆಸರಿನಲ್ಲಿ ಹಂತ ಹಂತವಾಗಿ 10.30 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.