ಕೋಲಾರ: ಹೆಚ್ಚಿನ ಅಂಕ ತೆಗೆಯಬೇಕೆಂಬ ಪಾಲಕರ ಒತ್ತಡದಿಂದ ಬೇಸತ್ತ 10ನೇ ತರಗತಿ ವಿದ್ಯಾರ್ಥಿನಿ ಬುಧವಾರ
ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕೋಲಾರ ತಾಲೂಕಿನ ವಸತಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿನಿ ಮಂಗಳವಾರ ನಡೆದ ಸಮಾಜ ವಿಜ್ಞಾನ ವಿಷಯದ ಕಿರು ಪರೀೆಯಲ್ಲಿ ಮೂರ್ನಾಲ್ಕು ಪ್ರಶ್ನೆಗಳಿಗೆ ಉತ್ತರ ಬರೆದಿರಲಿಲ್ಲ. ಆದ್ದರಿಂದ ಕಡಿಮೆ ಅಂಕ ಬರುವ ಆತಂಕದಲ್ಲಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಾಳೆ ಎನ್ನಲಾಗಿದೆ. ವಸತಿ ಶಾಲೆಯಲ್ಲಿ ಸ್ನೇಹಿತೊಂದಿಗೆ ಆಟವಾಡುತ್ತಿದ್ದ ವಿದ್ಯಾರ್ಥಿನಿ ಇದ್ದಕ್ಕಿದ್ದಂತೆ ಕೊಠಡಿಗೆ ತೆರಳಿದ್ದಾಳೆ, ಸ್ವಲ್ಪ ಸಮಯ ಬಾರದೆ ಇದ್ದಾಗ ಸ್ನೇಹಿತರು ಹೋಗಿ ಗಮನಿಸಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಇದ್ದುದನ್ನು ಗಮನಿಸಿ ಕೂಡಲೆ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.
ಆಕೆ ಪದೇ ಪದೆ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಪ್ರಸಂಗಗಳು ಇವೆ ಎಂದು ಅಲ್ಪ ಅಸಂಖ್ಯಾತ ಇಲಾಖೆ ಅಧಿಕಾರಿ ಮೈಲಾರಪ್ಪ ತಿಳಿಸಿದ್ದಾರೆ. ಸ್ಥಳಕ್ಕೆ ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್, ವಸತಿ ನಿಲಯದ ಪ್ರಾಂಶುಪಾಲ ಸೇರಿ ಶಿಕ್ಷಕರು ಆಸ್ಪತ್ರೆಗೆ ಭೆಟಿ ನೀಡಿದ್ದರು.