ಜಿಲ್ಲೆ

ಗಾಂಜಾ ಸೇವಿಸುತ್ತಿದ್ದಾಗಲೇ ಸಿಕ್ಕಿ ಬಿದ್ದ ಯುವಕರು ಈಗ ಪೊಲೀಸರ ವಶಕ್ಕೆ

mahalakshmihm

ಉತ್ತರಕನ್ನಡ: ನಗರದ ವಿವಿದೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಂಜಾ ಸೇವಿಸುತ್ತಿದ್ದಾಗಲೇ ಎಂಟು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಶಿರಸಿ ನಗರದ ಹಲವೆಡೆ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಮಾರುಕಟ್ಟೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಸೇವಿಸುತ್ತಿರುವಾಗಲೇ ಎಂಟು ಯುವಕರು ಸಿಕ್ಕಬಿದ್ದಿದ್ದಾರೆ.ಕಾರವಾರ ಕ್ರೀಮ್ಸ್​​ ಕಾಲೇಜಿನಲ್ಲಿ ಯುವಕರನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ಮಾರುಕಟ್ಟೆ ಠಾಣೆ ಪಿಎಸ್​​ಐ ಭೀಮಶಂಕರ ಹಾಗೂ ಅನಿಲಕುಮಾರ ಡಿ.ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. (ದಿಗ್ವಿಜಯ ನ್ಯೂಸ್​)