ನೇಪಾಳದ ಕಟ್ಮಂಡುವಿನ ತ್ರಿಭುವನ್ ಯುನಿವರ್ಸಿಟಿಯಲ್ಲಿ ಸ್ಕ್ವಾಯ್ ಫೆಡರೇಷನ್ ಆಫ್ ನೇಪಾಳ್ ಮತ್ತು ಸ್ಕ್ವಾ ಯ್ ಆರ್ಗನೈಸೇಷನ್ ಆಫ್ ಏಷ್ಯಾ ವತಿಯಿಂದ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಟ್ಟದ ತ್ರಿನೇಷನ್ ಸ್ಕ್ವಾ ಯ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಪಡೆದ ಹೊಳೆನರಸೀಪುರದ ಕ್ರೀಡಾಪಟುಗಳು. 
ಜಿಲ್ಲೆ

ಸ್ಕ್ವಾಯ್ನಲ್ಲಿ ವಿದ್ಯಾರ್ಥಿಗಳ ಸಾಧನೆ

ಶಿವಶಂಕರ್ ಎಂ. ಹೆಬ್ಬಳ್ಳ

ಹೊಳೆನರಸೀಪುರ : ನೇಪಾಳದ ಕಟ್ಮಂಡುವಿನ ತ್ರಿಭುವನ್ ಯುನಿವರ್ಸಿಟಿಯಲ್ಲಿ ಸ್ಕ್ವಾಯ್ ಫೆಡರೇಷನ್ ಆಫ್ ನೇಪಾಳ್ ಮತ್ತು ಸ್ಕ್ವಾ ಯ್ ಆರ್ಗನೈಸೇಷನ ಆಫ್ ಏಷ್ಯಾ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಟ್ಟದ ತ್ರಿನೇಷನ್ ಸ್ಕ್ವಾ ಯ್ ಚಾಂಪಿಯನ್‌ಷಿಪ್‌ನಲ್ಲಿ ಹೊಳೆನರಸೀಪುರದ ಕ್ರೀಡಾಪಟುಗಳು ಭಾಗವಹಿಸಿ ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಾಲೂಕಿನ ಸ್ಕ್ವಾಯ್ ನ್ಯಾಷನಲ್ ಶಾಲೆ ವಿದ್ಯಾರ್ಥಿಗಳು 3 ಚಿನ್ನದ ಪದಕ, 2 ಬೆಳ್ಳಿಯ ಪದಕ ಗಳಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತ, ನೇಪಾಳ ಮತ್ತು ಭೂತಾನ್ ರಾಷ್ಟ್ರ ಗಳು ಭಾಗವಹಿಸಿದ್ದವು.

ಜೂನಿಯರ್ ಕವಾಂಕಿ ವಿಭಾಗದಲ್ಲಿ ತಾಲೂಕಿನ ಡಿ.ವಿ.ಸೋಹನ್ ಮೌರ್ಯ ಮತ್ತು ಬಾಲಕಿಯರ ವಿಭಾಗದಲ್ಲಿ ಎಲ್.ರೀತು ಚಿನ್ನದ ಪದಕ ಹಾಗೂ ಫೈಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಸೀನಿಯರ್ ಬಾಲಕರ ಫೈಟಿಂಗ್ ವಿಭಾಗದಲ್ಲಿ ಎಲ್.ಎಸ್.ಹರ್ಷವರ್ಧನ್ ಚಿನ್ನದ ಪದಕ ಗಳಿಸಿದ್ದಾರೆ. ಇವರನ್ನು ಹಾಸನ ಜಿಲ್ಲಾ ಸ್ಕ್ವಾ ಯ್ ಸಂಸ್ಥೆ ಅಧ್ಯಕ್ಷರು ಹಾಗೂ ತರಬೇತುದಾರ ಎಚ್.ಎಂ.ಅಬ್ದುಲ್ ಹೈ ಹಾಗೂ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಎಚ್,ಯು.ಅಲಿ ಅಭಿನಂದಿಸಿದ್ದಾರೆ.