ರಾಯಬಾಗ: ವಸತಿ ನಿಲಯಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ನಿಲಯ ಕಟ್ಟಡ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮಂಗಳವಾರ ಜಿಪಂ ಅನುದಾನದಡಿ 15 ಲಕ್ಷ ರೂ.ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಹಾಗೂ 5 ಲಕ್ಷ ರೂ. ವೆಚ್ಚದ ಹಳೇ ಕಟ್ಟಡ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ವಸತಿ ನಿಲಯದ ಕಟ್ಟಡವನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.
ಪಪಂ ಅಧ್ಯಕ್ಷ ಅಶೋಕ ಅಂಗಡಿ, ಎಇ ಎಸ್.ಎಸ್.ಹೊಸಮನಿ, ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ ಕಲ್ಪನಾ ಕಾಂಬಳೆ, ವಿಸ್ತರಣಾಧಿಕಾರಿ ಸುರೇಶ ಮಲಾಜಿ, ಅನಿಲ ಬೊಮ್ಮನವರ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಸಂಗಣ್ಣ ದತ್ತವಾಡೆ, ಚಿದಾನಂದ ಹಳಿಂಗಳಿ, ರಾಜು ಮೊಮೀನ್, ಭಾರತಿ ಲೋಹಾರ, ಶಿವು ಕೋಳಿ, ರಿತೇಶ ಅವಳೆ, ಅನಿಲ ಕೊರವಿ, ಆರ್.ಎಸ್.ಪಾಟೀಲ ಇತರರಿದ್ದರು.