ಮಾಯಕೊಂಡ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ಗ್ರಾಮೀಣ ಪದವಿ ಕಾಲೇಜಿಗೆ ಮೂಲ ಸೌಲಭ್ಯಗಳ ಅಗತ್ಯ ಇದೆ ಎಂದು ಪ್ರಾಚಾರ್ಯು ಡಾ.ಎಲ್.ಎಂ. ತ್ರಿವೇಣಿ ಹೇಳಿದರು.
ಮಾಯಕೊಂಡ ಗ್ರಾಮದ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಇತಿಹಾಸ ವಿಷಯಗಳಲ್ಲಿ ನೂರು ಅಂಕಗಳಿಸಿದ ದ್ವಿತೀಯ ಬಿಎ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷ ಜು.1 ರಿಂದ ಬಿಎಸ್ಸಿ, ಪಿಸಿಎಂ ಪದವಿ ಅಧಿಕೃತವಾಗಿ ಪ್ರಾರಂಭಗೊಳ್ಳಲಿದ್ದು ಪಾಲಕರು ಇದೇ ಕಾಲೇಜಿಗೆ ದಾಖಲಿಸುವಂತೆ ಮನವಿ ಮಾಡಿದರು.
ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಎಸ್. ಸೋಮಶೇಖರ್, ಇತಿಹಾಸ ಪ್ರಾಧ್ಯಾಪಕ ಡಾ.ಜಿ. ಎಸ್. ಸದಾಶಿವ್ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಡಿ.ಎಂ. ದಿನೇಶ್, ಡಾ. ಲಕ್ಷ್ಮಣ್, ಡಾ. ಮೋಹನ್, ಡಾ. ಬಾಲಚಂದ್ರ, ಡಾ. ರಾಮಚಂದ್ರ, ಡಾ. ಸದಾಶಿವ ಸೇರಿ ಇತರರರಿದ್ದರು.