31ಎಂಡಿಆರ್2: ವಾರ್ಷಿಕ ಮಹಾ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮದ್ದೂರು ತಾಲೂಕು ಘಟಕ್ಕೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಜಿ.ಗೌರಿಶಂಕರ ಅವರನ್ನು ಅರ್ಚಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಿ.ವಿ. ಮಂಜುನಾಥ್, ಮಲೈ ಮಹದೇಶ್ವರ ಸ್ವಾಮಿ, ಬಸಪ್ಪ, ಪ್ರಸಾದ್ ಇದ್ದರು. 
ಜಿಲ್ಲೆ

ಸರ್ಕಾರದ ಗಮನ ಸೆಳೆಯಲು ಹೋರಾಟ ಅಗತ್ಯ

ವಸಂತಕುಮಾರ್ ಬಿ

ಮದ್ದೂರು: ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ನೌಕರರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಪಟ್ಟಾಭಿರಾಮ ಮಂದಿರದಲ್ಲಿ ಬುಧವಾರ ಆಯೋಜಿಸಲಾಗಿತ್ತು.

ಸಂಘದ ಅಧ್ಯಕ್ಷ ಮುದುಗೆರೆ ಎಂ.ಆರ್.ಶಶಿಮೋಹನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಆರ್ಚಕರು ಆಗಮಿಕರು ಮತ್ತು ನೌಕರರ ಸಂಘದವರಿಗೆ ನೀಡುತ್ತಿರುವ ಸವಲತ್ತುಗಳು ಕಡಿಮೆಯಾಗಿದ್ದು, ಇದೇ ರೀತಿ ಮುಂದುವರೆದರೆ ನಾವು ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ಸರ್ಕಾರ ಗಮನ ಸೆಳೆಯಲು ಸಾಂಘಿಕ ಹೋರಾಟ ಮಾಡಬೇಕಾಗಿದೆ ಎಂದರು.

ತಾಲೂಕು ಮುಜರಾಯಿ ದೇವಾಲಯಗಳ ಆರ್ಚಕರು, ಆಗಮಿಕರು ಮತ್ತು ನೌಕರರ ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಮುಂದಿನ ದಿಗಳಲ್ಲಿ ಸಂಘದ ಪದಾಧಿಕಾರಿಗಳ ವಿಶ್ವಾಸ ಪಡೆದು ಸಂಘವು ಮತ್ತಷ್ಟು ಉತ್ತಮ ರೀತಿಯಲ್ಲಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಭರವಸೆ ವ್ಯಕ್ತಪಡಿಸಿದರು.

ಸನ್ಮಾನ: ಅಖಿಲ ಭಾರತ ವೀರಶೈವ ಮಹಾಸಭಾದ ಮಂಡ್ಯ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಬಿ.ವಿ.ಮಂಜುನಾಥ್, ಮಂಡ್ಯ ಜಿಲ್ಲಾ ಅರ್ಚಕ ಒಕ್ಕೂಟದ ನೂತನ ಅಧ್ಯಕ್ಷ ಶ್ರೀಬಸಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಮದ್ದೂರು ತಾಲೂಕು ಘಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಸಿ.ಜಿ.ಗೌರಿಶಂಕರ ಹಾಗೂ ಹಲಗೂರು ಗ್ರಾಮದ ಪ್ರಸಾದ್ ಅವರನ್ನು ಸಂಘದಿಂದ ಇದೇ ವೇಳೆ ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ಎಂ.ಸಿ.ಸೂರ್ಯನಾರಾಯಣ ದೀಕ್ಷಿತ್, ಉಪಾಧ್ಯಕ್ಷರಾದ ವೈ.ಕೆ.ಕೆಂಪರಾಜ್, ಗುರಲಿಂಗಯ್ಯ, ಕಾರ್ಯಾಧ್ಯಕ್ಷ ಸಿ.ಜಿ.ಗೌರಿಶಂಕರ್, ಪ್ರಧಾನ ಕಾರ್ಯದರ್ಶಿ ವೈ.ಸಿ.ಬಸವರಾಜು, ಖಜಾಂಚಿ ನಿರಂಜನ್, ಕಾನೂನು ಸಲಹೆಗಾರ ಸಿ.ಆರ್.ಪ್ರಕಾಶ್‌ಚಕ್ರವರ್ತಿ, ಸಹ ಕಾರ್ಯದರ್ಶಿ ಸಿ.ಬಿ.ಮಹಾದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಎಸ್.ಆರ್.ದೇವರಾಜು, ಸಹ ಸಂಘಟನಾ ಕಾರ್ಯದರ್ಶಿ ಎಂ.ಪ್ರಕಾಶ್, ಸಂಚಾಲಕರಾದ ಬಿ.ಎಸ್.ನಾಗರಾಜು, ಚಲುವಯ್ಯ ಇದ್ದರು.