ಕೋಟ: ಮೂವತ್ತು ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ ನಡೆಸುತ್ತಾ ಬಂದಿರುವುದಲ್ಲದೇ ಸಾರ್ವಜನಿಕರಿಗೆ ಅನ್ನದಾನ ಪೂರೈಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಾಮ್ಯತೆ ಸಾಧಿಸಿದವರು ಮಲ್ಯಾಡಿ ಶಿವರಾಮ ಶೆಟ್ಟಿ ಸಹೋದರರು. ಮೇಳದ ಎಲ್ಲ ಕಲಾವಿದರಿಗೂ ನೆರವಾಗುತ್ತಾ ಅವಕಾಶ ಸುದೃಢಗೊಳಿಸಿದ ಮಹನೀಯರು ಎಂದು ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ ಹೇಳಿದರು.
ಮಲ್ಯಾಡಿ ಮಹಾದೇವಿ ದೇವಸ್ಥಾನದಲ್ಲಿ ಧರ್ಮಸ್ಥಳದ ಮೇಳದ ಶಿವರಾಮ ಶೆಟ್ಟಿ ಸಹೋದರರ ಧರ್ಮಸ್ಥಳ ಮೇಳದ 31ನೇ ಯಕ್ಷಗಾನದ ರಂಗದಲ್ಲಿ ಗುರುವಾರ ಹಿರಿಯ ಕಲಾವಿದ ವಸಂತ ಗೌಡ ಕಾಯತ್ತಡ್ಕ ಅವರನ್ನು ಅಭಿನಂದಿಸಿ ಮಾತನಾಡಿದರು.
ಗೌರವ ಉಪಸ್ಥಿತಿಯಲ್ಲಿ ತಲ್ಲೂರು ನಾರಾಯಣ ಶೆಟ್ಟಿ, ಮ್ಯಾನೇಜರ್ ಪುಷ್ಪರಾಜ್, ಆಡಳಿತ ಮಂಡಳಿ ಮುಖ್ಯಸ್ಥರಾದ ರಘುರಾಮ ಶೆಟ್ಟಿ, ಸದಾರಾಮ ಶೆಟ್ಟಿ, ಅರ್ಚಕ ಗಣಪತಿ ಅಡಿಗ ಉಪಸ್ಥಿತರಿದ್ದರು. ಮಲ್ಯಾಡಿ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.