ಜಿಲ್ಲೆ

ಕ್ರೀಡೆಯಿಂದ ಸದೃಢ ಆರೋಗ್ಯ

ಜಿ.ಹೆಚ್. ಧನ್ಯಕುಮಾರ್

ಪಂಚನಹಳ್ಳಿ: ಸಮಾಜದ ಯುವಕರುಗಳಲ್ಲಿ ಸಮಾನ ಮನಸ್ಥಿತಿ ತರವಲ್ಲಿ ಕ್ರೀಡಾಕೂಟಗಳು ಯಶಸ್ವಿಯಾಗಿದೆ ಎಂದು ತಾಲೂಕು ಕುಳುವ ಸಮಾಜದ ಅಧ್ಯಕ್ಷ ಅ.ಎ.ಗಿರೀಶ್ ಹೇಳಿದರು. ಬಿಳುವಾಲ ಗ್ರಾಮದಲ್ಲಿ ಆಯೋಜಿಸಿದ್ದ ಮೊದಲ ವರ್ಷದ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹ, ಆರೋಗ್ಯ ಸದೃಢವಾಗುವುದಲ್ಲದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಮೂಡುತ್ತದೆ ಎಂದು ತಿಳಿಸಿದರು. ಅಣ್ಣಿಗೆರೆ ಗ್ರಾಪಂ ಅಧ್ಯಕ್ಷ ಜಿ.ಡಿ.ಶಂಕರಪ್ಪ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡೆಗಳ ಯುವಕರಲ್ಲಿ ಉತ್ಸಾಹ ಹೆಚ್ಚಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಮಟ್ಟದಲ್ಲಿ ಕಡೂರಿನ ವೇದ ಕೃಷ್ಣಮೂರ್ತಿ ಆಯ್ಕೆಯಾಗಿರುವುದು ತಾಲೂಕಿಗೆ ಹೆಮ್ಮೆಯ ವಿಷಯ. ದುಬೈ ಶೇಷಪ್ಪ, ಚಂದ್ರು,ಬಿ.ಕೆ.ಪ್ರಕಾಶ್,ಬಸವರಾಜು, ರಾಮಚಂದ್ರಪ್ಪ, ಲೋಕೇಶ್, ಕೃಷ್ಣಮೂರ್ತಿ, ಪರಮೇಶಪ್ಪ, ದೇವರಾಜ್, ನಾಗರಾಜ್, ರವಿಕುಮಾರ್, ಮಹಾಲಿಂಗಪ್ಪ, ಇದ್ದರು.