ಡಾ.ಪ್ರಭಾಕರ ಕೋರೆ ಜನ್ಮದಿನ ಅಂಗವಾಗಿ ಅಂಕಲಿಗಿ ಗ್ರಾಮದಲ್ಲಿ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯ ಕರಪತ್ರವನ್ನು ಮಲ್ಲಿಕಾರ್ಜುನ ಕೋರೆ ಬಿಡುಗಡೆ ಮಾಡಿದರು. ಬಿ.ಆರ್.ಪಾಟೀಲ, ಭರತೇಶ ಬನವಣೆ, ಅಜಿತ್ ದೇಸಾಯಿ ಇತರರಿದ್ದರು. 
ಜಿಲ್ಲೆ

ಸದೃಢ ಮನಸ್ಸಿಗೆ ಕ್ರೀಡೆ ಅವಶ್ಯ

ಶಂಕರ ಗೆಜ್ಜಿ

ಚಿಕ್ಕೋಡಿ: ಇತ್ತೀಚೆಗೆ ಯುವಜನರು ಮೊಬೈಲ್ ದಾಸರಾಗುತ್ತಿರುವುದರಿಂದ ಗ್ರಾಮೀಣ ಕ್ರೀಡೆಗಳು ಮರೆಮಾಚುತ್ತಿವೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.

ತಾಲೂಕಿನ ಅಂಕಲಿ ಗ್ರಾಮದಲ್ಲಿ ಡಾ.ಪ್ರಭಾಕರ ಕೋರೆ ಜನ್ಮದಿನದ ಅಂಗವಾಗಿ ಅಂಕಲಿಯ ಡಾ.ಪ್ರಭಾಕರ ಕೋರೆ ಜನ್ಮದಿನದ ಆಚರಣಾ ಸಮಿತಿ ವತಿಯಿಂದ ಶ್ರೀಮತಿ ಶಾರದಾದೇವಿ ಕೋರೆ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿ ಕರಪತ್ರ ಬುಧವಾರ ಬಿಡುಗಡೆ ಮಾಡಿ ಮಾತನಾಡಿ, ದೇಹ ಹಾಗೂ ಮನಸ್ಸು ಸದೃಢವಾಗಿಸಲು ಗ್ರಾಮೀಣ ಕ್ರೀಡೆಗಳು ಅವಶ್ಯ. ಈ ನಿಟ್ಟಿನಲ್ಲಿ ಕುಸ್ತಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜನ್ಮದಿನ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ, ಕಾರ್ಯಾಧ್ಯಕ್ಷ ಭರತೇಶ ಬನವಣೆ, ಸದಸ್ಯ ಅಜಿತ್ ದೇಸಾಯಿ, ತಾತ್ಯಾಸಾಹೇಬ ಕಾಟೆ, ಪಿ.ಐ.ಪಾಟೀಲ, ಮಲ್ಲಪ್ಪ ಮೈಶಾಳೆ, ಬಿ.ಎ.ಪಾಟೀಲ, ಕುಸ್ತಿ ಕಮಿಟಿ ಪಂಚರಾದ ಸಂಜು ಕುಡಚಿ, ತಾತ್ಯಾಸಾಹೇಬ ಅಂಬಿ ಇತರರಿದ್ದರು.