ಮಲ್ಲಮ್ಮನ ಬೆಳವಡಿ: ಭಾರತೀಯ ಆಹಾರ ಪದ್ಧತಿ, ಯೋಗ ಮತ್ತು ವ್ಯಾಯಾಮ ಸದೃಢ ಶರೀರ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ಡಾ.ಸಂಗಮೇಶ ಸವದತ್ತಿಮಠ ಹೇಳಿದರು.
ಗ್ರಾಮದ ಶ್ರೀ ಈಶಪ್ರಭು ಶಿಣ ಸಂಸ್ಥೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೈದ್ಯ ಯೋಗ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ಎಂ.ಎಂ.ಕಾಡೇಶನವರ ಮಾತನಾಡಿ, ನಿತ್ಯದ ಒತ್ತಡದ ಬದುಕಿನ ಮಧ್ಯೆ ಆರೋಗ್ಯಕರ ಜೀವನ ಕಟ್ಟಿಕೊಳ್ಳಲು ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಜಿಪಂ ಸದಸ್ಯ ಈರಣ್ಣ ಕರಿಕಟ್ಟಿ, ಪ್ರಾಚಾರ್ಯ ಎಂ.ಪಿ.ಉಪ್ಪಿನ, ಮಹಿಳಾ ಪ್ರತಿಷ್ಠಾನ ಕಾರ್ಯದರ್ಶಿ ಸವಿತಾ ಬೂದಿಹಾಳ, ಶಂಕರ ಯಳೂರ, ಶಿಕ ವೀರೇಶ ಕಾಡೇಶನವರ, ಜಗದೀಶ ಅಂಗಡಿ, ರವಿ ಮುರುಗೋಡ, ಸೋಮಲಿಂಗ ಮಾರಪ್ಪನವರ ಇತರರಿದ್ದರು. ನೇತ್ರಾ ಬಿಸ್ರೋಳ್ಳಿ ನಿರೂಪಿಸಿದರು.