ಜಿಲ್ಲೆ

ಭಾರತದ ಶ್ರೇಷ್ಠ ಪರಂಪರೆ ರಕ್ಷಣೆಗೆ ಶ್ರಮಿಸಿ

ಕೃಷ್ಣ ಕುಲಕರ್ಣಿ

ಚಿತ್ತಾಪುರ: ಭಾರತೀಯರದು ಶೌರ್ಯ ಮತ್ತು ಪರಾಕ್ರಮದ ಪರಂಪರೆ. ಹಿಂದು ಧರ್ಮ ಮತ್ತು ಭಾರತ ಮಾತೆಯ ರಕ್ಷಣೆಗಾಗಿ ಅಸಂಖ್ಯ ಜನರು ಪ್ರಾಣತ್ಯಾಗ ಮಾಡಿದ್ದಾರೆ. ಅವರನ್ನೆಲ್ಲ ನಾವು ಸದಾ ಸ್ಮರಿಸಬೇಕು ಎಂದು ಬೆಂಗಳೂರಿನ ಕ್ಷತ್ರಿಯ ಮಠದ ವಯಂ ಧರ್ಮಚಾರ್ಯ ಸಂಪರ್ಕ ಪ್ರಮುಖ ವಕ್ತಾರ ಬಸವರಾಜ ಹಿರೇಮಠ ಹೇಳಿದರು.

ಬಾಲಾಜಿ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೌರ್ಯ ಪ್ರದರ್ಶಿಸಿ ಸೇವೆಯೊಂದಿಗೆ ರಾಷ್ಟçಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಸ್ಮರಣೆಗಾಗಿ ವಿಎಚ್‌ಪಿ ಭಾರತದಲ್ಲಿ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಂಡಿದೆ. ನಮ್ಮ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆ ರಕ್ಷಣೆಗೆ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.

ಯುವಕರಲ್ಲಿ ದೇಶಾಭಿಮಾನದ ಕಿಚ್ಚು ಹೊತ್ತಿಸುವ ಕಾರ್ಯಕ್ರಮ ಇದಾಗಿದೆ. ಭಾರತದಲ್ಲಿ ಸೆ.30ರಿಂದ ಶೌರ್ಯ ಜಾಗರಣ ರಥಯಾತ್ರೆ ಆರಂಭವಾಗಿದ್ದು, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಅ.13ರಂದು ಕಲಬುರಗಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ವಿಎಚ್‌ಪಿ ಜಿಲ್ಲಾ ಸಹ ಕಾರ್ಯದರ್ಶಿ ಮಹಾದೇವ ಅಂಗಡಿ, ತಾಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ ಮಾತನಾಡಿದರು. ಸೂಗೂರ(ಕೆ) ಮಠದ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಉದ್ಘಾಟಿಸಿದರು.

ಬಜರಂಗದಳ ವಿಭಾಗೀಯ ಸಂಯೋಜಕ ಬಸವರಾಜ ಸೂಗೂರ, ಜಿಲ್ಲಾ ಸಂಯೋಜಕ ವೀರೇಂದ್ರ ಮುರುಡಾ, ಸಹ ಸಂಯೋಜಕ ಅಜಯಕುಮಾರ ಬಿದರಿ, ಪ್ರಮುಖರಾದ ಸುವರ್ಣಾ ಶಿಲ್ಪಿ, ನಿರ್ಮಲಾ ಭಂಗಿ, ರೇಣುಕಾ ಬಿರಾದಾರ, ಮೇಘರಾಜ ಗುತ್ತೇದಾರ್, ರಾಜೇಂದ್ರ ಬೆಳಗೇರಾ, ಮಲ್ಲಿಕಾರ್ಜುನ ಉಪ್ಪಾರ, ತಾಯಪ್ಪ ಬೋವಿ, ಶರಣು ಪೂಜಾರಿ, ಮಣಿಕಂಠ ರಾಠೋಡ್, ಮಲ್ಲಿಕಾರ್ಜುನ ಎಮ್ಮೆನೋರ, ಮಲ್ಲಿಕಾರ್ಜುನ ಪೂಜಾರಿ, ಪ್ರಹ್ಲಾದ್ ವಿಶ್ವಕರ್ಮ, ಅಶ್ವತ್ಥ ರಾಠೋಡ್, ಕೋಟೇಶ್ವರ ರೇಷ್ಮಿ, ಸಾಬಣ್ಣ ಪೂಜಾರಿ, ಚಂದ್ರಕಾAತ ದೊಡ್ಮನಿ, ಅಂಬಣ್ಣ ಹೋಳಿಕಟ್ಟಿ, ಹಣಮಂತ ಹೋಳಿಕಟ್ಟಿ, ಶೋಭಾ ಕುಂಬಾರ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಮುಗುಳನಾಗಾಂವ್, ಆಕಾಶ ಮಂಗಲಿಕರ್, ಸಾಬಣ್ಣ ಹೋಳಿಕಟ್ಟಿ, ಯಲ್ಲಾಲಿಂಗ ಸುಲ್ತಾನಪುರ, ಯಲ್ಲಪ್ಪ ಪುಂಗಿ ಇತರರಿದ್ದರು.

ಜಿಲ್ಲಾಧ್ಯಕ್ಷ ಪ್ರದೀಪ ಪಾಟೀಲ್ ಹೊಸಳ್ಳಿ ಪ್ರಾಸ್ತಾವಿಕ ಮಾತನಾಡಿದರು. ವಿಎಚ್‌ಪಿ ವಿಭಾಗೀಯ ಸಹ ಕಾರ್ಯದರ್ಶಿ ಅಂಬರೇಶ ಸುಲೇಗಾಂವ್ ಸ್ವಾಗತಿಸಿದರು. ಸಂತೋಷ ಅಲ್ಲೂರ್ ನಿರೂಪಣೆ ಮಾಡಿದರು.