ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯಲ್ಲಿ ನಮ್ಮ ನಡೆ ಜಾನಪದ ಕಲಾವಿದರ ಕಡೆ ಕಾರ್ಯಕ್ರಮದಲ್ಲಿ ಕಲಾವಿದ ರಾಮಪ್ಪ ಚಂದಪ್ಪನವರ ದಂಪತಿಯನ್ನು ಸನ್ಮಾನಿಸಲಾಯಿತು. ಸದಾಶಿವ ಗುರೂಜಿ, ರಮೇಶ ಅರಕೇರಿ, ರಾಘವೇಂದ್ರ ನೀಲಣ್ಣವರ ಇದ್ದರು. 
ಜಿಲ್ಲೆ

ಕಲಾವಿದರಿಗೆ ಮಾಶಾಸನ ದೊರಕಿಸಲು ಶ್ರಮಿಸಿ

ಗಿರೀಶ ಸಗರ

ಮಹಾಲಿಂಗಪುರ: ಮುಂದಿನ ದಿನಗಳಲ್ಲಿ ಜಾನಪದ ದತ್ತಿ ಕಾರ್ಯಕ್ರಮ ಮಾಡುವ ಉದ್ದೇಶವಿದ್ದು, ತಾಲೂಕಿನ ಎಲ್ಲ ಸರ್ಕಾರಿ ಶಿಕ್ಷಕರು ನಮ್ಮೊಡನೆ ಕೈ ಜೋಡಿಸುವರೆಂಬ ವಿಶ್ವಾಸವಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಮುಧೋಳ ತಾಲೂಕು ಘಟಕದ ಅಧ್ಯಕ್ಷ ರಮೇಶ ಅರಕೇರಿ ಹೇಳಿದರು.

ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ ರಾಜ್ಯ ಘಟಕ, ಬಾಗಲಕೋಟೆ ಜಿಲ್ಲಾ ಘಟಕ, ಮುಧೋಳ ತಾಲೂಕು ಘಟಕ ಹಾಗೂ ರನ್ನಬೆಳಗಲಿಯ ವಲಯ ಘಟಕ, ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕದ ಆಶ್ರಯದಲ್ಲಿ ರನ್ನಬೆಳಗಲಿಯ ಕನಕದಾಸ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಮ್ಮ ನಡೆ ಜಾನಪದ ಕಲಾವಿದರ ಮನೆ ಕಡೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಪದಾಧಿಕಾರಿಗಳು ಸೇರಿ ಕಲಾವಿದರಿಗೆ ಸರ್ಕಾರದ ಮಾಶಾಸನ ದೊರಕಿಸಿಕೊಡಲು ಶ್ರಮಿಸಬೇಕು ಎಂದರು.

ರನ್ನಬೆಳಗಲಿ ಋಷಿ ಯೋಗಾಶ್ರಮದ ಯೋಗಿರಾಜೇಂದ್ರ ಸದಾಶಿವ ಗುರೂಜಿ ಮಾತನಾಡಿ, ಕಲಾವಿದರು ಉಳಿದರೆ ಕಲೆ ಉಳಿಯಲು ಸಾಧ್ಯ. ಎಲೆಮರೆಯ ಕಾಯಿಯಂತೆ ಕಣ್ಮರೆ ಆಗುತ್ತಿರುವ ಕಲಾವಿದರನ್ನು ಗುರುತಿಸಿ ಪ್ರೊತ್ಸಾಹಿಸುವಂತಾಗಬೇಕು ಎಂದರು.

ರನ್ನಬೆಳಗಲಿಯ ಕಜಾಪ ಅಧ್ಯಕ್ಷ ರಾಘವೇಂದ್ರ ನೀಲಣ್ಣವರ, ತಾಲೂಕು ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಶಿಕ್ಷಕ ಕೆ.ಎ. ಧಡೂತಿ ಮಾತನಾಡಿದರು.

ತಿಂಗಳ ಕಲಾವಿದರಾದ ರಾಮಪ್ಪ ಚಂದಪ್ಪನವರ ತಮ್ಮ ಅನುಭವ ಹಂಚಿಕೊಳ್ಳುವ ಜತೆಗೆ ಸಿಂಗಾರಿ ಸ್ತ್ರೀ ಪಾತ್ರದ ಪ್ರಾತ್ಯಕ್ಷಿಕೆ ತೋರ್ಪಡಿಸಿದರು. ಹಿರಿಯ ಕಲಾವಿದ ಬಸುಪ್ರಭು ಕುಂಬಾರ ಅವರಿಗೆ ಸಾಥ್ ನೀಡಿದರು.

ಕಸಾಪ ವಲಯ ಘಟಕದ ಕೋಶಾಧ್ಯಕ್ಷ ಎಸ್. ಎಲ್. ಕಂಬಾರ ಸ್ವಾಗತಿಸಿದರು. ಶಿವಾನಂದ ಕರ್ಕಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ನಾಗರಾಜ ವಂದಿಸಿದರು. ಶಿಕ್ಷಕ ಹನುಮಂತ ಮಲಾವಡಿ ಪರಿಚಯಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾನಪ್ಪ ಲೋಹಾರ, ಪತ್ರಕರ್ತರಾದ ಮಹಾದೇವ ಕುಲಗೋಡ, ಲಕ್ಕಪ್ಪ ಹಾರುಗೇರಿ, ಕಸಾಪ ತಾಲೂಕು ಪ್ರತಿನಿಧಿ ಪಿ. ಬಿ ಹಿರೇಮಠ, ಸದಾಶಿವ ಪುರಾಣಿಕ, ರವಿ ಮೇತ್ರಿ, ಹನುಮಂತ ಸೋನೋನೆ, ಮಹಾಂತೇಶ ಗೂಳಪ್ಪಗೋಳ, ಲಕ್ಕಪ್ಪ ಭಜಂತ್ರಿ, ಹಣಮಂತ ಪುರಾಣಿಕ, ರಾಮಲಿಂಗ ಯಾದವಾಡ, ಈರಪ್ಪ ಬಾವಿಮನಿ, ಶಿವಕುಮಾರ ಕೋಳಿ, ಮುತ್ತವ್ವ ಹೂಗಾರ, ಪರಶುರಾಮ ಕ್ವಾನ್ಯಾಗೋಳ, ಮಲ್ಲಿಕಾರ್ಜುನ ಬನಹಟ್ಟಿ ಇತರರಿದ್ದರು.