ಜಿಲ್ಲೆ

ಜನಪರ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ

ಸುಭಾಸ ಹೆಗಡೆ ಧೂಪದಹೊಂಡ

ಯಲ್ಲಾಪುರ: ಗ್ರಾಪಂ ಚುನಾವಣೆಯಲ್ಲಿ ಜನಪರ ಕಾರ್ಯನಿರ್ವಹಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಮದನೂರು ಗ್ರಾ.ಪಂ ವ್ಯಾಪ್ತಿಯ ಹುಣಶೆಟ್ಟಿಕೊಪ್ಪ, ಹುಲಗೋಡ ಗ್ರಾಮಗಳಲ್ಲಿ ಹಾಗೂ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಹೊಸಳ್ಳಿ, ಖಾರೆವಾಡ, ಬೈಲಂದೂರುಗಳಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ ಸಚಿವರು, ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಪಕ್ಷದ ಸ್ಥಳೀಯ ಪ್ರಮುಖರಾದ ವಿಜಯ ಮಿರಾಶಿ, ರಾಘವೇಂದ್ರ ಗೊಂದಿ, ಸುಭಾಸ್ ತೋರಸ್ಕರ್, ಮಹೇಶ್ ದೇಸಾಯಿ, ವಿನಾಯಕ ತಿನ್ನೇಕರ, ಚಂದು ಮಾಡಾಕರ್, ರೆಹಮತ್ ಅಬ್ಬಿಗೇರಿ, ಆನಂದ ಕುರಿ, ಆನಂದ ಮಿರಾಶಿ, ಮುಸ್ತಾಕ ಶೇಖ್ ಇತರರಿದ್ದರು.