ಲೋಕಾಪುರ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬಾಗಲಕೋಟೆ ಜಿಲ್ಲಾ ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಭಾನುವಾರ ಪೂರ್ವಭಾವಿ ಸಭೆ ನಡೆಸಲಾಯಿತು. ಡಾ. ಗಿರೀಶ ಮಾಸುರಕರ, ರಾಘವೇಂದ್ರ ಕುಲಕರ್ಣಿ, ವಸಂತರಾವ ಕುಲಕರ್ಣಿ, ಬಿ.ಎಲ್. ಬಬಲಾದಿ, ಕೃಷ್ಣಾಜಿ ಕುಲಕರ್ಣಿ ಇತರರಿದ್ದರು. 
ಜಿಲ್ಲೆ

ಸಮ್ಮೇಳನ ಯಶಸ್ಸಿಗೆ ಶ್ರಮಿಸಿ

Vijayapura - Desk - Gurappa Lokuri

ಲೋಕಾಪುರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.18, 19 ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಸಂಭ್ರಮ ಹಾಗೂ ವಿಶ್ವಾಮಿತ್ರ ಬ್ರಾಹ್ಮಣ ಮಹಾ ಸಮ್ಮೇಳನ ನಿಮಿತ್ತ ರಾಘವೇಂದ್ರ ಸೇವಾ ಸಮಿತಿ, ಬಾಗಲಕೋಟೆ ಜಿಲ್ಲಾ ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಡಾ. ಗೀರೀಶ ಮಾಸುರಕರ ಮಾತನಾಡಿ, ಸಮುದಾಯ ಒಗ್ಗಟ್ಟಾದರೆ ಸಾಮಾಜಿಕ ಪ್ರಗತಿ ಸಾಧ್ಯ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.

ರಾಜ್ಯ ಸಮ್ಮೇಳನದ ಸಹ ಸಂಚಾಲಕ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಇತರೆ ಸಮಾಜಗಳಂತೆ ನಾವು ಸರ್ಕಾರದ ಸೌಲಭ್ಯ ಪಡೆಯಬೇಕು. ಮೊದಲು ನಮ್ಮ ಒಳಪಂಗಡ, ಆಚಾರ-ವಿಚಾರಗಳನ್ನು ಮನೆಯೊಳಗೆ ಮಾತ್ರ ಸೀಮಿತವಾಗಿಟ್ಟುಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸಂಘಟಿತರಾಗಬೇಕೆಂದು ಸಲಹೆ ನಿಡಿದರು.

ವಿಪ್ರ ಸಮಾಜದ ಅಧ್ಯಕ್ಷ ವಸಂತರಾವ ಕುಲಕರ್ಣಿ ಮಾತನಾಡಿದರು.

ಈಲ್ಲ ಜಿಲ್ಲಾಧ್ಯಕ್ಷ ನರಸಿಂಹ ಆಲೋರ, ವಿನಾಯಕ ತಾಳಿಕೋಟಿ, ಎಸ್.ಕೆ. ಕುಲಕರ್ಣಿ, ಕಿರಣ ಕುಲಕರ್ಣಿ, ಗಿರೀಶ ಆಶ್ರೀತ, ಗುರುರಾಜ ಕುಲಕರ್ಣಿ, ಕೇಶವ ಕುಲಕರ್ಣಿ, ವಿನಾಯಕ ಬೋಕರೆ, ಲೋಕಾಪುರ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಸಂತರಾವ ಕುಲಕರ್ಣಿ, ಬಿ.ಎಲ್. ಬಬಲಾದಿ, ಕೃಷ್ಣಾಜಿ ಕುಲಕರ್ಣಿ, ಶ್ರೀನಿವಾಸರಾವ ಕುಲಕರ್ಣಿ, ಭೀಮಣ್ಣ ಜೋಶಿ, ಪ್ರವೀಣ ಸೋಮಾಪುರ, ಆನಂದಾಚಾರ್ಯ ಜಂಬಗಿ ಇದ್ದರು.