ಸಂಶಿ: ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಆರೋಗ್ಯವಂತ ಸ್ವಸ್ಥ ಸಮಾಜ ನಿರ್ವಿುಸಲು ಕಂಕಣಬದ್ಧರಾಗಿ ನಿಂತಾಗ ಮಾತ್ರ ವ್ಯಸನ ಮುಕ್ತ ಸಮಾಜ ನಿರ್ವಿುಸಲು ಸಾಧ್ಯವಾಗುತ್ತದೆ ಎಂದು ವೈದ್ಯ ಡಾ ಸುಧೀಂದ್ರ ಹುದ್ದಾರ ಹೇಳಿದರು.
ಗ್ರಾಮದ ಕೆಎಲ್ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ನಿರಾಮಯ ಫೌಂಡೇಷನ್ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಗಳ ಸ್ಮರಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವೇಕ ಭಾರತ ವ್ಯಸನಮುಕ್ತ ಯುವಜನತೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದುಶ್ಚಟಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ನಿರಾಮಯ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ ಜೀವನ ಹಾಳು ಮಾಡಿಕೊಳ್ಳಬಾರದು ಎಂದರು. ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎ.ಬಿ. ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು ನಿರಾಮಯ ಫೌಂಡೇಷನ್ ಅಧ್ಯಕ್ಷ ಗುರು ಬನ್ನಿಕೊಪ್ಪ, ಪ್ರಾಚಾರ್ಯ ಪೊ›. ರಮೇಶ ಅತ್ತಿಗೇರಿ. ಗಿರಿಧರ ಹಿರೇಮಠ, ದೀಪಕ ಬೆಡಸೂರ, ವಿಕಾಸ ಕಿರೇಸೂರ, ಮಹೇಶ ಶಾಮಾಳ, ಚೇತನ ಗೌಡಪ್ಪಗೌಡ್ರ, ಇತರರು ಉಪಸ್ಥಿತರಿದ್ದರು.