ಕುಳಗೇರಿ ಕ್ರಾಸ್ ಸಮೀಪದ ಗೋವನಕೊಪ್ಪ ಬ್ರಹ್ಮಾನಂದ ಸ್ವಾಮಿಗಳ ಜಾತ್ರೆ ಅಂಗವಾಗಿ ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಶಾಂತಲಿಂಗ ಸ್ವಾಮೀಜಿ, ಕಮಿಟಿ ಅಧ್ಯಕ್ಷ ಕಿಷ್ಟಣ್ಣ ಬಿಜಾಪೂರ, ಆರ್. ಎಚ್.ಯಾವಗಲ್, ಎನ್.ಎಚ್. ಪಾಟೀಲ, ಮುದಕಣ್ಣ ಹೆರಕಲ್, ಹನುಮಂತಗೌಡ ಪಾಟೀಲ, ಮುರಳೀಧರ ಯಡನ್ನವರ ಇತರರಿದ್ದರು. 
ಜಿಲ್ಲೆ

ಜಾತ್ರೆ ಯಶಸ್ವಿಗೆ ಶ್ರಮಿಸಿ

Vijayapura - Desk - Gurappa Lokuri

ಕುಳಗೇರಿಕ್ರಾಸ್: ಸಮೀಪದ ಸುಕ್ಷೇತ್ರ ಗೋವನಕೊಪ್ಪ ಬ್ರಹ್ಮಾನಂದ ಪರಮಹಂಸರ 87ನೇ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಮಠದ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಭೈರನಹಟ್ಟಿಯ ಶ್ರೀ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬ್ರಹ್ಮಾನಂದ ಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಡಿ. 31 ರಿಂದ ಜ. 9ರ ವರೆಗೆ ನಿತ್ಯ ಬ್ರಹ್ಮಾನಂದರ ಜೀವನ ದರ್ಶನ ಪ್ರವಚನ ಸೇರಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಹರ-ಗುರು ಚರಮೂರ್ತಿಗಳು ಭಾಗವಹಿಸಲಿದ್ದು, ಶ್ರೀಮಠದಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ರವಚನಕ್ಕೆ ಆಗಮಿಸುವ ಶರಣರು, ಸಂತರು ಹಾಗೂ ಭಕ್ತರಿಗೆ ಸರಿಯಾದ ಊಟ, ವಸತಿ ವ್ಯವಸ್ಥೆ ಕಲ್ಪಿಸಬೇಕು. ಜಾತ್ರೆ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಮಹಿಳೆಯರು ತಮ್ಮ ಮನೆ ಅಂಗಳ, ಪ್ರಮುಖ ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಂಡು ನಿತ್ಯ ರಂಗೋಲಿ ಹಾಕಿ ತಳಿರು ತೋರಣಗಳಿಂದ ಅಲಂಕರಿಸಬೇಕು. ಯುವಕರು ಕುಡಿಯುವ ನೀರು ಸೇರಿ ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂದು ತಿಳಿಸಿದರು.

ಕಮಿಟಿ ಅಧ್ಯಕ್ಷ ಕಿಷ್ಟಣ್ಣ ಬಿಜಾಪೂರ, ಆರ್. ಎಚ್.ಯಾವಗಲ್, ಎನ್.ಎಚ್. ಪಾಟೀಲ, ಮುದಕಣ್ಣ ಹೆರಕಲ್, ಹನುಮಂತಗೌಡ ಪಾಟೀಲ, ಮುರಳೀಧರ ಯಡನ್ನವರ, ಚಂದ್ರಗೌಡ ಪಾಟೀಲ, ದಾವಲ್‌ಸಾಬ ಹೊಸಮನಿ, ಪ್ರವೀಣ ಮೇಟಿ, ಎಂ.ಎಸ್. ಮೇಟಿ, ಸಿದ್ದಪ್ಪ ಶಿರಗುಂಪಿ, ಪ್ರಕಾಶ ಉಪ್ಪಾರ ಇತರರಿದ್ದರು.