ಗುಳೇದಗುಡ್ಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಅಧಿಕಾರಿಗಳ ತಾಲೂಕು ಸಂಘದ ನೇತೃತ್ವದಲ್ಲಿ ಗ್ರಾಮಾಡಳಿತ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಅರ್ನಿದಿಷ್ಟಾವಧಿ ಮುಷ್ಕರ ಆರಂಭಿಸಿದರು.
ಸುಸಜ್ಜಿತ ಕಚೇರಿ, ಫೋನ್, ಲ್ಯಾಪ್‌ಟಾಪ್, ಪ್ರಿಂಟರ್ ಸೌಲಭ್ಯ ಒದಗಿಸಬೇಕು. ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಅಗಿರುವ ಅಮಾನತುಗಳನ್ನು ರದ್ದುಗೊಳಿಸಬೇಕು. ಪ್ರಯಾಣ ಭತ್ಯೆಯನ್ನು 3000 ರೂ.ಗೆ ಹೆಚ್ಚಿಸಬೇಕು. ಮನೆ ಹಾನಿ ಪ್ರಕರಣದ ಜವಾಬ್ದಾರಿಯಿಂದ ಗ್ರಾಮ ಆಡಳಿತಾಧಿಕಾರಿಗಳನ್ನು ಕೈಬಿಡಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ಅಧ್ಯಕ್ಷ ಎಂ.ಎಸ್. ಗುಡಿಸಾಗರ ಮಾತನಾಡಿ, ಬೇಡಿಕೆಗಳು ಈಡೇರುವವರೆಗೂ ಧರಣಿ ಸತ್ಯಾಗ್ರಹ ಮುಂದುವರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸತ್ಯಾಗ್ರಹದಲ್ಲಿ ಪಿ.ಪಿ. ತಳವಾರ, ಎಚ್.ಡಿ. ಭಗವತಿ. ಎಂ.ಎಚ್. ಮುಜಾವರ, ಎಸ್.ಜಿ. ತರೂರ, ಪಿ.ಬಿ. ಹುನ್ನಳ್ಳಿ, ಭಾಗ್ಯಶ್ರೀ ಹುನಗುಂಡಿ, ಅನುಷಾ ಪಾಟೀಲ, ಎ.ಎ. ಮುಲ್ಲಾ ಇತರರಿದ್ದರು.