ಜಿಲ್ಲೆ

ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ 20ರಂದು ಮುಷ್ಕರ

ದೊಡ್ಡಬಳ್ಳಾಪುರ: ನಗರದ ಕನ್ನಡ ಜಾಗೃತ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಾರ್ಮಿಕ ಸಂಟನೆಗಳ ಜಂಟಿ ಸಮಿತಿ ಜೆಸಿಟಿಯು ನೇತೃತ್ವದಲ್ಲಿ ಇತ್ತೀಚೆಗೆ ಪ್ರಗತಿಪರ ಸಮಾನ ಮನಸ್ಕ ಸಂ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕಾನೂನು ಬದ್ಧಗೊಳಿಸುವ ಹುನ್ನಾರಗಳ ಕುರಿತು ಚರ್ಚಿಸಲಾಯಿತು.

ಮೇ 20ರಂದು ಜೆಸಿಟಿಯು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ. ಇದಕ್ಕೆ ಬೆಂಬಲವಾಗಿ ಸಂಯುಕ್ತ ಕಿಸಾನ್​ ಮೋರ್ಚಾ ಬೆಂಬಲವಾಗಿ ನಿಂತಿದೆ. ರೈತರು, ಕಾರ್ಮಿಕರ ತ್ಯಾಗ ಬಲಿದಾನಗಳಿಂದ ಪಡೆದುಕೊಂಡಿದ್ದ ಸಂವಿಧಾನ ಬದ್ಧ ಹಕ್ಕುಗಳನ್ನು ನಿರ್ನಾಮ ಮಾಡಿ ಆಧುನಿಕ ಗುಲಾಮಗಿರಿಗೆ ತಳ್ಳುವ ನಾಲ್ಕು ಸಂಹಿತೆ ಜಾರಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಿವೆ. ಇದನ್ನು ವಿರೋಧಿಸಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಸಿಟಿಯು ನೇತೃತ್ವದಲ್ಲಿ ಮೇ 15ರಂದು ಪ್ರಚಾರ ಜಾಥಾ, 17ರಂದು ಬೈಕ್​ ರ್ಯಾಲಿ ಹಾಗೂ 20 ರಂದು ಸಂಟಿತ, ಅಸಂಟಿತ ಸ್ಕೀಮ್​ನಲ್ಲಿ ದುಡಿಯುವ ಎಲ್ಲ ಕಾರ್ಮಿಕರು ಬೆಂಗಳೂರಿನ ಟೌನ್​ ಹಾಲ್​ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಅದೇ ದಿನ ಬೆಳಗ್ಗೆ ದೊಡ್ಡಬಳ್ಳಾಪುರದ ಡಿ ಕ್ರಾಸ್​ನಲ್ಲಿ ರೈತ ಸಂದ ನೇತೃತ್ವದಲ್ಲಿ ಸಿಪಿಐಎಂ, ಕೆಆರ್​ಎಸ್​, ಕನ್ನಡ ಪಕ್ಷ, ಎಎಪಿ, ಸವೋರ್ದಯ ಜನಶಕ್ತಿ, ರೈತ ಸಂ ಮತ್ತು ರೈತರು, ದಲಿತರು, ಕನ್ನಡ ಪರ ಸಂಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲು ತೀರ್ಮಾನಿಸಲಾಯಿತು.

ಸಿಪಿಐಎಂ ಪಕ್ಷದ ಮುಖಂಡ ಆರ್​.ಚಂದ್ರತೇಜಸ್ವಿ, ಎಸ್​.ರುದ್ರರಾಧ್ಯ, ಜನಶಕ್ತಿ ರೈತ ಸಂದ ರಮೇಶ್​ ಸಂಕ್ರಾಂತಿ, ಎಸ್ಸಿಲ್ಲಾರ್​ ಕಾರ್ಮಿಕ ಸಂದ ಮುಖಂಡ ಜಯಣ್ಣ.ಎನ್​.ಸಿ, ಆನಂದ್​ ಕುಮಾರ್​, ಸಿಐಟಿಯು ಮುಖಂಡ ರೇಣುಕರಾಧ್ಯ, ಕೆಪಿಆರ್​ಎಸ್​ ಮುಖಂಡರಾದ ಶಿವಲಿಂಗಯ್ಯ, ದಾಳಪ್ಪ, ಎಆರ್​ಡಿಯು ಸಂದ ಮುಖಂಡ ಸಾಧಿಕ್​ ಪಾಷ ಸೇರಿ ಹಲವರು ಇದ್ದರು.