ಕಾರವಾರ: ಕನ್ನಡ ವಿರೋಧಿ ಹೇಳಿಕೆ ನೀಡಿರುವ ಕಮಲ ಹಾಸನ್ ಅವರ ಥಗ್ ಲೈಫ್ ಚಿತ್ರವನ್ನು ಜಿಲ್ಲೆಯ ಯಾವುದೇ ಚಿತ್ರ ಮಂದಿರದಲ್ಲಿ ಪ್ರದರ್ಶನ ಮಾಡದಂತೆ ಕರವೇ ಪ್ರವೀಣ ಶೆಟ್ಟಿ ಬಣ ಒತ್ತಾಯಿಸಿದೆ.
ನಗರದ ಗೀತಾಂಜಲಿ ಚಿತ್ರ ಮಂದಿರದ ಎದುರು ಕರವೇ ಕಾರ್ಯಕರ್ತರು ನಟ ಕಮಲ್ ಹಾಸನ್ ಭಾವಚಿತ್ರ ಸುಟ್ಟು ಪ್ರತಿಭಟನೆ ನಡೆಸಿದರು. ಕಮಲ್ ಹಾಸನ್ ವಿರುದ್ಧ ಘೋಷಣೆ ಕೂಗಿದರು. ಥಗ್ ಲೈಪ್ ಚಿತ್ರ ಪ್ರದರ್ಶಿಸದಂತೆ ಗೀತಾಂಜಲಿ ಚಿತ್ರಮಂದಿರದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ ಎಂದು ಕಮಲ್ ಹಾಸನ್ ಹೇಳಿ ಕನ್ನಡಕ್ಕೆ ಅವಮಾನ ಮಾಡಿದ್ದಾರೆ. ತಮಿಳು ಭಾಷಾಭಿಮಾನ ಮೆರೆಯುವ ಆತುರದಲ್ಲಿ ಅವರು ಕನ್ನಡಗಿಗದ ಭಾಗವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು. ಕರವೇ ಜಿಲ್ಲಾಧ್ಯಕ್ಷ ಅಕ್ಷಯ ನಾಗೇಕರ್, ಉಪಾಧ್ಯಕ್ಷ ಲೋಕೇಶ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ಮಹೇಶ ಬಾಂದೇಕರ್,ಪ್ರಥಮೆಶ್,ಗಣೇಶ ಕೆಸರೇಕರ್, ನಂದಾ ನಾಯ್ಕ, ಚೇತನ್ ಕೊಠಾರಕರ್, ಪುನೀತ ಅಂಬಿಗ, ದರ್ಶನ್ ವೆರ್ಣೇಕರ್, ಶೋಯೆಬ್ ಗುತ್ತಲ ಇದ್ದರು.