ಜಿಲ್ಲೆ

Strike: ಉದ್ಯೋಗ ಭದ್ರತೆ ನೀಡುವಂತೆ 7 ವರ್ಷಗಳಿಂದ ದುಡಿಯುತ್ತಿರುವ ಎಂಬಿಕೆ, ಎಲ್‌ಸಿಆರ್‌ಪಿಗಳ ಆಗ್ರಹ

Uttara Kannada - Subash Hegde

ಕಾರವಾರ strike: ವೇತನ ಪಾವತಿ, ಉದ್ಯೋಗ ಭದ್ರತೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿ ಕಾರ್ಯ ನಿರ್ವಹಿಸುತ್ತಿರುವ ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರರು(ಎಂಬಿಕೆ), ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು (ಎಲ್‌ಸಿಆರ್‌ಪಿ)  ಜಿಲ್ಲಾ ಪಂಚಾಯಿತಿ ಕಚೇರಿಯ ಎದುರು ಮಂಗಳವಾರ ಧರಣಿ ನಡೆಸಿದರು.

ಜಿಲ್ಲೆಯ 30 ಅಧಿಕ ಕಾರ್ಯಕರ್ತೆಯರು ಜಿಪಂ ಎದುರು ಮೌನ ಧರಣಿ ನಡೆಸಿದರು. ಜಿಪಂ ಸಿಇಒ ಈಶ್ವರ ಕಾಂದೂ ಅವರಿಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿದರು.

strikeಬೇಡಿಕೆಗಳು:

ಗ್ರಾಮ ಮಟ್ಟದಲ್ಲಿ ಕಳೆದ ಏಳು ವರ್ಷಗಳಿಂದ ದುಡಿಯುತ್ತಿದ್ದೇವೆ. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ಸ್ವಸಹಾಯ ಸಂಘಗಳ ರಚನೆ, ಕರ ಸಂಗ್ರಹ ಸಮೀಕ್ಷೆ, ಸೇರಿದಂತೆ ವಿವಿಧ ಕಾರ್ಯ ಮಾಡುತ್ತಿದ್ದೇವೆ. ಜನರನ್ನು ನೇರವಾಗಿ ತಲುಪಿ ಸರ್ಕಾರಕ್ಕೆ ವರದಿ ಕಳಿಸುತ್ತಿದ್ದೇವೆ. ಆದರೆ, ಗೌರವಧನ ನೀಡುತ್ತಿದ್ದು, ಅದು ಅತಿ ಕಡಿಮೆಯಾಗಿದೆ. ಎಷ್ಟು ಸ್ವ ಸಹಾಯ ಸಂಘಗಳನ್ನು ರಚನೆ ಮಾಡಿದ್ದೇವೆ ಎಂಬುದನ್ನು ಆಧರಿಸಿ ಗೌರವಧನ ನೀಡಲಾಗುತ್ತಿದೆ. ಇದರಿಂದ ನಮಗೆ ಮಾಸಿಕ ವೇತನ ವ್ಯವಸ್ಥೆ ಮಾಡಬೇಕು. ಪಿಎಫ್, ಇಎಸ್‌ಐ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ನಮ್ಮ ಈ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಡಿ.1ರ ವರೆಗೆ ಕೆಲಸ ಸ್ಥಗಿತಗೊಳಿಸುವಂತೆ ರಾಜ್ಯ ಘಟಕದಿಂದ ಸೂಚನೆ ಬಂದಿದೆ. ಕೆಲಸದಿಂದ ದೂರ ಉಳಿದು ಪ್ರತಿಭಟಿಸಲಿದ್ದೇವೆ ಎಂದು ಮಾಹಿತಿ ನೀಡಿದರು. ಮನವಿ ಸ್ವೀಕರಿಸಿದ ಜಿಪಂ ಸಿಇಒ ಈಶ್ವರ ಕಾಂದೂ ಹಿರಿಯ ಅಽಕಾರಿಗಳೊಂದಿಗೆ ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಶ್ವೇತಾ ಬಾಂದೇಕರ್, ಶೋಭಾ ಮೊಗೇರ, ಭಾರತಿ ಎಸ್.ಕೆ, ವರ್ಷಾ ನಾಯ್ಕ, ಅಂಕಿತಾ ಬಾಂದೇಕರ್ ಇತರರು ಈ ಸಂದರ್ಭದಲ್ಲಿದ್ದರು.