ಜಿಲ್ಲೆ

ಬಸ್​ ಸಮಸ್ಯೆ ಪರಿಹರಿಸವಂತೆ ಕೋರಿ ಮುಷ್ಕರ

ತುಮಕೂರು ಡೆಸ್ಕ್

ಗುಬ್ಬಿ: ಪಟ್ಟಣದಲ್ಲಿ ಬಸ್​ ನಿಲ್ಲಿಸುವಂತೆ ಒತ್ತಾಯಿಸಿ ಅ.14ರಂದು ಮುಷ್ಕರ ನಡೆಸುವುದಾಗಿ ಗುಬ್ಬಿ ಪಟ್ಟಣ ಹಿತರಕ್ಷಣಾ ಸಮೀತಿ ಅಧ್ಯಕ್ಷ ಎಚ್​.ಡಿ.ಎಲ್ಲಪ್ಪ ತಿಳಿಸಿದರು. ಗುಬ್ಬಿ ಪಟ್ಟಣದ ನಿವೃತ್ತ ನೌಕರರ ಕಟ್ಟಡದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಬಸ್​ ಸಮಸ್ಯೆ ಕುರಿತಂತೆ ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅ.14ರಂದು ಗುಬ್ಬಿ ಪಟ್ಟಣದ ಜೂನಿಯರ್​ ಕಾಲೇಜು ಮುಂಭಾಗ ಮುಷ್ಕರ ನಡೆಸುವುದಾಗಿ ಎಚ್ಚರಿಸಿದರು. ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಗುಬ್ಬಿಯ ಹೊರವಲಯದಲ್ಲಿ ಬೈಪಾಸ್​ ರಸ್ತೆ ನಿಮಾರ್ಣ ಮಾಡಿದ್ದು, ಇದರಿಂದಾಗಿ ಗುಬ್ಬಿಗೆ ಬೆರಳೆಣಿಕೆಯ ಬಸ್​ಗಳು ಬರುತ್ತಿವೆ. ಎಲ್ಲ ಬೈಪಾಸ್​ ಮೂಲಕವೇ ಹಾದು ಹೋಗುತ್ತಿವೆ. ಇದರಿಂದ ನಿತ್ಯ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ ತುಮಕೂರು ಹಾಗೂ ಬೆಂಗಳೂರಿಗೆ ಹೋಗುವವರಿಗೆ ತೊಂದರೆ ಉಂಟಾಗುತ್ತಿದೆ ಎಂದರು.ಮುಖಂಡರಾದ ಸಿ.ಆರ್​.ಶಂಕರ್​ ಕುಮಾರ್​, ವೇಣು ಗೋಪಾಲ್​, ಕವಿತಾ, ಅಪ್ಪಾಜಿ, ಜಿ.ಎನ್​.ಬಸವರಾಜು ಮತ್ತಿತರರು ಇದ್ದರು.