ಜಿಲ್ಲೆ

ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಗೆ ವಿರೋಧ

ಎ. ಆರ್. ರಘುರಾಮ

ಹುಣಸೂರು: ಸಹಕಾರ ಕ್ಷೇತ್ರಗಳಲ್ಲಿ ದಲಿತರಿಗೆ ಮೀಸಲಾತಿ ನೀಡುವುದು ಬೇಡ ಎಂದು ಸದನದಲ್ಲಿ ಶಾಸಕ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆ ವಿರೋಧಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆ ಮುಖಂಡರು

ಪ್ರತಿಭಟನೆ ನಡೆಸಿದರು. ನಗರದ ಸಂವಿಧಾನ ವೃತ್ತದಲ್ಲಿ ಜಿ.ಟಿ.ದೇವೇಗೌಡರ ವಿರುದ್ಧ ಘೋಷಣೆಗಳನ್ನು ಕೂಗಿದ ಮುಖಂಡರು, ಈ ನಡೆ ಸರಿಯಲ್ಲ ಎಂದರು. ಈ ಸಂದರ್ಭ ಮಾತನಾಡಿದ ಸೋಷಿಯಲ್ ಜಸ್ಟೀಸ್ ಫೋರಂನ ಮಹದೇವ್, ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿ ದಲಿತರಿಗೆ ಮೀಸಲಾತಿ ನೀಡುವ ಸಲುವಾಗಿ ಸಹಕಾರ ಕಾಯ್ದೆಗೆ ತಿದ್ದುಪಡಿ ತರಲು ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸುವ ವೇಳೆ ಜಿ.ಟಿ.ದೇವೇಗೌಡ ದಲಿತರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುವ ಮೂಲಕ ಸಂವಿಧಾನ ಮತ್ತು ದಲಿತ ವಿರೋಧಿ ಮನಸ್ಥಿತಿ ಹೊರಹಾಕಿದ್ದಾರೆ. ಹಿರಿಯ ರಾಜಕಾರಣಿಯಾದ ಜಿಟಿಡಿ ಅವರ ಈ ನಡೆ ದಲಿತರಲ್ಲಿ ಆಘಾತ ಉಂಟುಮಾಡಿದೆ. ಜಿಟಿಡಿ ಮನಸ್ಥಿತಿ ಬದಲಾಗದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರತ್ನಪುರಿ ಪುಟ್ಟಸ್ವಾಮಿ, ಮುತ್ತುರಾಹನಹೊಸಳ್ಳಿ ಶಿವರಾಜ್, ಮಹದೇವಮ್ಮ, ರೇಣುಕ, ಸಿದ್ದೇಶ್, ಬಾಲಸುಂದರ, ಚಲುವರಾಜ್, ಹಗರನಹಳ್ಳಿ ಕುಮಾರ್, ಬಸವರಾಜು, ಪುಟ್ಟರಾಜು, ಮಹೇಶ್, ರಾಜು ಚಿಕ್ಕಹುಣಸೂರು ಕುಟ್ಟವಾಡಿ ಮಹದೇವಮ್ಮ, ಮುದಾಸಿರ್, ಅಜೀಜುಲ್ಲಾ, ಕೃಷ್ಣ, ಪರಮೇಶ್, ಗಿರೀಶ್ ಇತರರಿದ್ದರು.