ಜಿಲ್ಲೆ

ವಹಿವಾಟು ಚುನಾವಣೆ ಆಯೋಗದ ಕಟ್ಟುನಿಟ್ಟು

Haveri

ಹಾವೇರಿ: ಬ್ಯಾಂಕ್‌ಗಳ ಹಣಕಾಸು ವಹಿವಾಟು ಮೇಲೆ ಚುನಾವಣಾ ಆಯೋಗ ತೀವ್ರ ನಿಗಾ ವಹಿಸಿದೆ.
ಒಂದು ಲಕ್ಷ ರೂ. ಗಿಂತ ಮೇಲ್ಪಟ್ಟು ವಹಿವಾಟು ನಡೆಸುವವರ ಮಾಹಿತಿ ಕಲೆ ಹಾಕುತ್ತಿದೆ.
ಸಂಶಯಾಸ್ಪದ ವಹಿವಾಟುಗಳು ಕಂಡುಬಂದಲ್ಲಿ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ.
ಮತಕ್ಕಾಗಿ ಹಣ, ಉಡುಗೊರೆ ಹಂಚಿಕೆಗಾಗಿ ವಹಿವಾಟು ನಡೆಯುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಎಲ್ಲ ಬ್ಯಾಂಕ್‌ಗಳು ತಮ್ಮ ಶಾಖೆಗಳಲ್ಲಿ ನಡೆಯುವ ಒಂದು ಲಕ್ಷ ರೂ.ಗೂ ಮೀರಿದ ವಹಿವಾಟಿನ ಮಾಹಿತಿಯನ್ನು ನಿತ್ಯ ಲೀಡ್ ಬ್ಯಾಂಕ್‌ಗೆ ಒದಗಿಸಬೇಕು.
ಲೀಡ್ ಬ್ಯಾಂಕ್ ಅದನ್ನು ಜಿಲ್ಲಾ ಚುನಾವಣಾಧಿಕಾರಿ (ಡಿಸಿ)ಗೆ ರವಾನಿಸಬೇಕು.

ವಹಿವಾಟು ಸಂಶಯಾಸ್ಪದ

ಸಂಶಯಾಸ್ಪದ ವಹಿವಾಟುಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದರ ಜತೆಗೆ, ೧೦ ಲಕ್ಷ ರೂ. ಮೀರಿದ ವಹಿವಾಟುಗಳ ಮೇಲೆ ಚುನಾವಣಾ ಅಧಿಕಾರಿಗಳ ತಂಡ ವಿಶೇಷ ನಿಗಾ ಇಟ್ಟಿದೆ.
ಏ. ೭ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬ್ಯಾಂಕರ್‌ಗಳ ಸಭೆ ನಡೆಸಿ, ನೀತಿ ಸಂಹಿತೆ ಪಾಲಿಸುವ ಕುರಿತು ಸೂಚನೆಗಳನ್ನು ನೀಡಲಾಗಿದೆ.
ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡುವುದು, ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳುವುದು.
ಡೆಪಾಸಿಟ್ ಇಡುವ ಕುರಿತು ಸ್ಟಾೃಂಡರ್ಡ್ ಆಪರೇಶನ್ ಪ್ರೊಸೀಜರ್ (ಎಸ್‌ಒಪಿ) ಅನ್ವಯ ಸೂಚನೆಗಳನ್ನು ನೀಡಲಾಗಿದೆ ಎನ್ನುತ್ತಾರೆ ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ ಆರ್.


ಇರಲಿ ರೆಕಾರ್ಡ್ಸ್

ಯಾವುದೇ ಅಧಿಕೃತ ವ್ಯಾಪಾರ, ಮನೆ ನಿರ್ಮಾಣ, ಮತ್ತಿತರ ಕಾರಣಗಳಿಗಾಗಿ ಹಣ ವಹಿವಾಟು ಮಾಡುವವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಆಯೋಗ ಬ್ಯಾಂಕ್‌ಗಳಿಗೆ ಸೂಚಿಸಿದೆ. ಹಣ ಸಾಗಿಸುವವರು ಸೂಕ್ತ ದಾಖಲೆ ಇಟ್ಟುಕೊಂಡಿದ್ದರೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

ಜಿಲ್ಲೆಯಲ್ಲಿವೆ ೪೪೦ ಶಾಖೆ


ಹಾವೇರಿ ಜಿಲ್ಲೆಯಲ್ಲಿ ೨೨೪ ವಿವಿಧ ಬ್ಯಾಂಕ್ ಶಾಖೆಗಳಿವೆ. ಇಂಡಿಯನ್ ಪೋಸ್ಟಲ್ ಪೇಮೆಂಟ್ (ಐಪಿಬಿ) ಬ್ಯಾಂಕ್ ಸೇರಿ ಒಟ್ಟು ೪೪೦ ಶಾಖೆಗಳಿವೆ. ಎಲ್ಲ ಶಾಖೆಗಳಿಗೂ ಮುಖ್ಯ ಕಚೇರಿಯಿಂದ ಚುನಾವಣೆ ಕುರಿತು ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ.