ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕಾನಿಪ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ಕ್ರೀಡಾಕೂಟವನ್ನು ಶಾಸಕ ಕೆ.ನೇಮಿರಾಜನಾಯ್ಕ ಉದ್ಘಾಟಿಸಿದರು. ಬಿಇಒ ಮೈಲೇಶ ಬೇವೂರ್, ಕಾನಿಪ ಜಿಲ್ಲಾ ಉಪಾಧ್ಯಕ್ಷ ಬುಡ್ಡಿಬಸವರಾಜ, ತಾಲೂಕು ಅಧ್ಯಕ್ಷ ಉಮಾಪತಿ ಶೆಟ್ಟರ್, ಸಿಡಿಪಿಒ ಬೋರೆಗೌಡ, ಬಿಸಿಯೂಟದ ಅಧಿಕಾರಿ ರಾಜಕುಮಾರ ಇತರರಿದ್ದರು. 
ಜಿಲ್ಲೆ

ಒತ್ತಡ ನಿವಾರಿಸಲು ಕ್ರೀಡಾಕೂಟ ಸಹಕಾರಿ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಶಿಕ್ಷಕರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿ ಉದ್ಘಾಟಿಸಿದ ಶಾಸಕ ಕೆ.ನೇಮಿರಾಜ ನಾಯ್ಕ, ಪ್ರತಿವರ್ಷ ಪತ್ರಕರ್ತರ ಸಂಘ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು, ಶಿಕ್ಷಕರ ಮತ್ತು ಪತ್ರಕರ್ತರ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ. ಕ್ರೀಡಾಕೂಟಗಳು ಒತ್ತಡ ನಿವಾರಿಸಲು ಸಹಕಾರಿಯಾಗಿವೆ ಎಂದರು.

ಬಿಇಒ ಮೈಲೇಶ ಬೇವೂರು ಮಾತನಾಡಿ, ಶಿಕ್ಷಕರ ಮತ್ತು ಪತ್ರಕರ್ತರ ಕೆಲಸ ಒಂದೇ ರೀತಿಯಾದಾಗಿದೆ. ಒಬ್ಬರದು ಸಮಾಜ ನಿರ್ಮಾಣ ಮತ್ತೊಬ್ಬರದು ಸಮಾಜ ತಿದ್ದುವ ಕೆಲಸವಾಗಿದೆ. ಅವರವರ ಕೆಲಸ ಅತ್ಯಂತ ಶ್ರದ್ಧೆಯಿಂದ ಮಾಡಿದರೆ ಉತ್ತಮ ಸಮಾಜ ನಿರ್ಮಾಣಮಾಡಲು ಸಾಧ್ಯವಾಗುತ್ತದೆ ಎಂದರು.

ಪ್ರಮುಖರಾದ ಕನ್ನಿಹಳ್ಳಿ ಚಂದ್ರಶೇಖರ, ಲಿಂಗರಾಜ ಯಾದವ, ಸರದಾರ್ ಯಮನೂರಪ್ಪ, ಹೋಟೆಲ್ ಸಿದ್ದರಾಜು, ಶಿಕ್ಷಣ ಸಂಯೋಜಕ ಶಿವಲಿಂಗ ಸ್ವಾಮಿ, ಬಿಆರ್‌ಪಿಯ ಪರಮೇಶ್ವರಯ್ಯ ಸೊಪ್ಪಿಮಠ, ಪ್ರೌಢಶಾಲೆ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರವಿಚಂದ್ರ ನಾಯ್ಕ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ ಇತರರಿದ್ದರು.