ಬೆಳಗಾವಿ: ಸಾಕು ಪ್ರಾಣಿಗಳು ಕುಟುಂಬಗಳಲ್ಲಿ ಸದಸ್ಯರಾಗುತ್ತಿವೆ. ಬೆಕ್ಕು ಮತ್ತು ನಾಯಿಗಳಂತಹ ಸಾಕು ಪ್ರಾಣಿಗಳಿದ್ದರೆ ಒತ್ತಡ ನಿವಾರಣೆಯಾಗುತ್ತದೆ ಎಂದು ಪಶು ವೈದ್ಯಕಿಯ ಶಸ ಚಿಕಿತ್ಸಕ ಡಾ.ಜಿ.ಪಂಪಾಪತಿ ಹೇಳಿದರು.
ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಅಯೋಧ್ಯ ನಗರದಲ್ಲಿ ಹೈಟೆಕ್ ಶಸ ಚಿಕಿತ್ಸಾ ಸೌಲಭ್ಯ ಒಳಗೊಂಡಿರುವ ಸೋಲಮೇಟ್ಸ್ ವೆಟ್ "ಸಾಕು ಪ್ರಾಣಿಗಳ ಸೂಪರ್ ಸ್ಪೆಷಾಲಿಟಿ' ಆಸ್ಪತ್ರೆ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಐದು ವರ್ಷಗಳ ಹಿಂದೆ ಆಸ್ಪತ್ರೆ ಸಂಸ್ಥಾಪಕಿ ಡಾ.ವಿಜಯಲಕ್ಷಿ$್ಮ ಕುಲಗೊಡ ಬೆಳಗಾವಿಯಲ್ಲಿ ಸಾಕುಪ್ರಾಣಿ ಆಸ್ಪತ್ರೆ ಪ್ರಾರಂಭಿಸುವ ಆಲೋಚನೆಯೊಂದಿಗೆ ಬೆಂಗಳೂರಿಗೆ ನನ್ನ ಬಳಿ ಬಂದಿದ್ದರು. ಈಗ ಅತ್ಯಾಧುನಿಕ ಮತ್ತು ಸುಸಜ್ಜಿತ ಸಾಕುಪ್ರಾಣಿ ಆಸ್ಪತ್ರೆ ಉದ್ಘಾಟಿಸಲು ನನಗೆ ಸಂತೋಷವಾಗಿದೆ ಎಂದರು.
ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಡಾ.ವಿಜಯಲಕ್ಷಿ$್ಮ ಕುಲಗೋಡ, ಡಾ.ಶಶಿಕಾಂತ ಕುಲಗೋಡ ಮಾತನಾಡಿ, ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಗ ರ್ನಿಣಯ ಸೌಲಭ್ಯ, ಆಪರೇಷನ್ ಥಿಯೇಟರ್ ಮತ್ತು ತುರ್ತು ಸೇವೆಗಳು ಇವೆ.
ಆಸ್ಪತ್ರೆಯ ಸಲಹೆಗಾರರು ಮತ್ತು ಪಶು ವೈದ್ಯಕಿಯ ಶಸಚಿಕಿತ್ಸಕ ಡಾ.ಅವಿನಾಶ ಭೀರ್ಡೆ, ಡಾ.ಅನಿಲ್ ಕುಮಾರ ಜಾಮಿ, ಸರ್ಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಪನಿರ್ದೇಶಕ ಡಾ.ಶಶಿಧರ ನಾಡಗೌಡ, ಕರ್ನಾಟಕ ಪಶುವೈದ್ಯಕಿಯ ಸಂದ ಮಾಜಿ ಅಧ್ಯ ಡಾ.ವಿಶ್ವನಾಥ ಬಂಟಿ, ಖ್ಯಾತ ಪಶು ವೈದ್ಯಾಧಿಕಾರಿ ಡಾ.ಸುಧಾ ನಾಡಗೌಡ, ಡಾ.ಹೇಮಂತ್ ಸಾಣಕ್ಕಿ, ಡಾ.ಶ್ರೀಕಾಂತ್ ಗಾಂವಿ, ಆಸ್ಪತ್ರೆಯ ಆಡಳಿತಾಧಿಕಾರಿ ರೂಪ ತಳವಾರ ಇತರರಿದ್ದರು.