ಹೂವಿನಹಡಗಲಿ: ಆಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ ಪಾಲ್ಗೊಳುವಿಕೆ ಮುಖ್ಯ ಎಂದು ಪದವಿಪೂರ್ವ ಕಾಲೇಜಿನ ತಾಲೂಕು ನೋಡಲ್ ಅಧಿಕಾರಿ ಕೋರಿ ಹಾಲೇಶ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಹೊಳಗುಂದಿ ಗ್ರಾಮದ ಗ್ಲೋಬಲ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಕ್ರೀಡಾ ಕೂಟದಲ್ಲಿ ಮಾತನಾಡಿದರು. ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ಮುಖ್ಯ. ಕ್ರೀಡೆಯು ದೇಹವನ್ನು ಸದೃಢಗೊಳಿಸಲು ಸಹಾಯಕವಾಗಿದೆ.
ಕ್ರೀಡಾಪಟುಗಳು ನಿರಂತರವಾಗಿ ಅಭ್ಯಾಸ ಮಾಡಬೇಕು. ಕ್ರೀಡೆ ಒತ್ತಡ ನಿಭಾಯಿಸಲು, ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದರು. ವಾಲಿಬಾಲ್, ಕಬ್ಬಡಿ, ಬಾಲ್ ಬ್ಯಾಡ್ಮಿಂಟನ್, ಶಟಲ್‌ಬ್ಯಾಡ್ಮಿಂಟನ್ ಕ್ರೀಡೆಗಳು ನಡೆದವು.