ಹೊರ್ತಿ ಸಮೀಪದ ದೇವರನಿಂಬರಗಿಯಲ್ಲಿ ನಡೆದ ರೈತ ಸಂಘದ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿದರು. ಶಿವಪ್ಪಗೌಡ ಮಳಗೊಂಡ, ಸಿದ್ದಣಗೌಡ ಬಿರಾದಾರ, ಪ್ರಕಾಶ ಅಲಕುಟಿ, ಶಂಕರೆಪ್ಪ ನಾವಿ, ಗುಡುಸಾಬ ಬರಡೋಲ, ಧರೆಪ್ಪ ಕೋಳಿ, ಶರಣಪ್ಪ ಹಡಪದ ಇತರರಿದ್ದರು. 
ಜಿಲ್ಲೆ

ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘದ ಸಂಘಟನೆ ಬಲಪಡಿಸಿ

ಹೊರ್ತಿ: ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘದ ಸಂಘಟನೆ ಬಲಪಡಿಸಬೇಕೆಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಹೇಳಿದರು.

ಸಮಿಪದ ದೇವರನಿಂಬರಗಿ ಗ್ರಾಮದ ಹನುಮಾನ ಮಂದಿರ ಆವರಣದಲ್ಲಿ ನಡೆದ ರಾಜ್ಯ ರೈತ ಸಂಘದ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಬಗ್ಗೆ ಯಾರಿಗೂ ಯಾವ ಪಕ್ಷಗಳಿಗೂ ಕಾಳಜಿ ಇರುವುದಿಲ್ಲ. ರೈತರನ್ನು ಯಾವ ಸರ್ಕಾರವೂ ಉದ್ಧಾರ ಮಾಡುವುದಿಲ್ಲ. ಸರ್ಕಾರ ವಿದ್ಯುತ್ ನೀರು ನೀಡುವಲ್ಲಿ ವಿಫಲವಾಗಿದೆ. ರೈತರು ಸಾಲಕ್ಕಾಗಿ ಬ್ಯಾಂಕ್‌ಗಳ ಮುಂದೆ ಭಿಕ್ಷುಕನಂತೆ ನಿಲ್ಲಬೇಕಿದೆ. ಆದರೆ, ಬ್ಯಾಂಕ್‌ಗಳು ಮಾತ್ರ ಸೂಟು ಬೂಟ್ ಇದವರಿಗೆ ಸಾಲ ನೀಡುತ್ತಿವೆ. ರೈತರನ್ನು ಕಡೆಗಣಿಸಿವೆ ಎಂದು ದೂರಿದರು.

ಶಿವಪ್ಪಗೌಡ ಮಳಗೊಂಡ, ಸಿದ್ದಣಗೌಡ ಬಿರಾದಾರ, ಪ್ರಕಾಶ ಅಲಕುಟಿ, ಶಂಕರೆಪ್ಪ ನಾವಿ, ಗುಡುಸಾಬ ಬರಡೋಲ, ಧರೆಪ್ಪ ಕೋಳಿ, ಶರಣಪ್ಪ ಹಡಪದ, ಶಿವಪ್ಪ ಕೋಟಿ, ಶಿವಪ್ಪ ಮಳಕೊಟ್ಟಗಿ, ಭೀಮಾಶಂಕರ ಜಂಗಲಗಿ, ಸಿದ್ದರಾಮ ಗಾಡಿವಡ್ಡರ, ಬೀರಪ್ಪ ಸಲಗರ, ಮೌಲಾಸಾಬ ಸಾತಲಗಾಂವ ಹಾಗೂ ಎಲ್ಲ ರೈತ ಸಂಘದ ಸಂಘಟಕರು ಇದ್ದರು.