ಸವಣೂರ: ಪಟ್ಟಣದಿಂದ ಖಾನಕೋಣ, ಗೋವಾಕ್ಕೆ ಹೋಗುವ ಹಾಗೂ ಮರಳಿ ಭಾನುವಾರ ರಾತ್ರಿ 8 ಗಂಟೆಗೆ ಖಾನಕೋಣ, ಕಾರವಾರ, ಬಂಕಾಪುರ ಮಾರ್ಗವಾಗಿ ಸವಣೂರಿಗೆ ಬರುವಂತೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಬೀದಿಬದಿ ವ್ಯಾಪಾರಸ್ಥರು ಗುರುವಾರ ಸವಣೂರ ಕೆಎಸ್ಆರ್ಟಿಸಿ ಬಸ್ ಘಟಕದ ವ್ಯವಸ್ಥಾಪಕ ಮುನ್ನಾಸಾಬ್ ಟಿ.ಎಸ್., ಅವರಿಗೆ ಮನವಿ ಸಲ್ಲಿಸಿದರು.
ಸವಣೂರ ಪಟ್ಟಣ ನಿವಾಸಿಗಳು ತರಕಾರಿ, ಹಣ್ಣು ಇತ್ಯಾದಿ, ಬೀದಿ ವಾರದ ಸಂತೆ ವ್ಯಾಪಾರಸ್ಥರಿದ್ದು, ಬುಧವಾರ ಬೆಳಗಿನ ಜಾವ ಯಲ್ಲಾಪೂರದ ಗುಳ್ಳಾಪುರ ಬಳಿ ಸಂಭವಿಸಿದ ರಸ್ತೆ ಅಪಘಾತ ಕಂಡಾಗ ನಮಗೆ ರಕ್ಷಣೆ ಇಲ್ಲದಂತಾಗಿದೆ. ನಮಗೆ ಭಯವಾಗುತ್ತಿದೆ. ಅಲ್ಲದೆ, ಬೀದಿಬದಿ ಸಂತೆ ವ್ಯಾಪಾರ ಮಾಡಿಕೊಂಡು ನಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದೂ, ಬೀದಿ ವ್ಯಾಪಾರ ನಮಗೆ ಅನಿವಾರ್ಯವೂ ಆಗಿದೆ. ಹೀಗಾಗಿ ಶುಕ್ರವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ಸವಣೂರಿನಿಂದ, ಬಂಕಾಪೂರ, ಕಾರವಾರ, ಖಾನಕೋಣ, ಗೋವಾಕ್ಕೆ ಹೋಗಲು ಮತ್ತು ಮರಳಿ ಭಾನುವಾರ ರಾತ್ರಿ 8 ಗಂಟೆಗೆ ಖಾನಕೋಣ, ಕಾರವಾರ, ಬಂಕಾಪುರ ಮಾರ್ಗವಾಗಿ ಸವಣೂರಿಗೆ ಬರಲು ಅನುವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೀದಿಬದಿ ವ್ಯಾಪಾರಸ್ಥರಾದ ಕುಮಾರ ಉಪ್ಪಿನ, ಅಣ್ಣಪ್ಪ ಉಪ್ಪಿನ, ಹನಮಂತ ಜಾಧವ, ಬಾಬುಕಾಶಿಂ ಅಕ್ರಂ, ವಾಸೀಂ ಸವಣೂರ, ಜಗದೇಶ ಆರೇರ, ದಿಲದಾರಖಾನ್, ಬಾಷಾ ಆಶೀಪ್ ಕಿಲ್ಲದಾರ, ಮುಜಾಹಿದಹಮದ್, ಇತರರಿದ್ದರು.