ಕಿಕ್ಕೇರಿ: ಗ್ರಾಮದಲ್ಲಿ ರೋಗಗ್ರಸ್ತ ನಾಯಿಗಳ ಕಾಟ ವಿಪರೀತವಾಗಿದ್ದು ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ.
ಪಟ್ಟಣಕ್ಕೆ ಸಂತೆಗಾಗಿ ಬರುವ ರೈತರೊಂದಿಗೆ ಸಾಕಷ್ಟು ನಾಯಿಗಳು ಬಂದು, ಬಹುತೇಕ ಪಟ್ಟಣದಲ್ಲಿಯೇ ಬೀಡುಬಿಟ್ಟಿವೆ. ಜತೆಗೆ ರೋಗಗ್ರಸ್ತ ನಾಯಿಗಳ ಕಾಟ ಹೆಚ್ಚಿದೆ. ನೋಡಲು ಭಯಂಕರವಾಗಿ ಕಾಣುವ ನಾಯಿಗಳು ಮನೆಗಳಿಗೆ ನುಗ್ಗಿ ಆತಂಕ ಸೃಷ್ಟಿಸುತ್ತಿವೆ. ಇಂತಹ ನಾಯಿಗಳ ಉಪಟಳವನ್ನು ನಿಯಂತ್ರಿಸದೆ ಸ್ಥಳೀಯ ಗ್ರಾಮ ಪಂಚಾಯಿತಿ ಮೌನವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಓಡಾಡಲು ಆತಂಕಪಡುವಂತಾಗಿದೆ.
ಪ್ರಾಣಿದಯಾ ಸಂಸ್ಥೆಯವರು ನಾಯಿಗಳನ್ನು ಸ್ವಯಂ ಪ್ರೇರಣೆಯಿಂದ ಹಿಡಿದು ಸಾಕುವ ವ್ಯವಸ್ಥೆ ಮಾಡಿದರೆ ಬಹಳ ಉಪಯೋಗವಾಗಲಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಗುರುಮೂರ್ತಿ.