ಗುರುಪುರ: ಇಲ್ಲಿನ ಪೇಟೆ ಹಾಗೂ ಹತ್ತಿರದ ಅಲೈಗುಡ್ಡೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ(169) ವಾಹನ ಚಲಾಯಿಸುವವರಲ್ಲಿ ಆತಂಕ ಉಂಟಾಗಿದೆ.
ಇಲ್ಲಿನ ಮೂರ‌್ನಾಲ್ಕು ಕಡೆ ರಸ್ತೆ ಬದಿಯ ಅಂಗಡಿಗಳೆದುರು 20ಕ್ಕೂ ಹೆಚ್ಚು ಬೀದಿನಾಯಿಗಳು ದ್ವಿಚಕ್ರ ವಾಹನ ಸವಾರರಿಗೆ ಭೀತಿ ಹುಟ್ಟಿಸುವಂತೆ ಅಡ್ಡಾಡುತ್ತಿವೆ. ಇದರಿಂದ ನಡೆದಾಡಲು, ರಸ್ತೆ ದಾಟಲು ಕಷ್ಟವಾಗುತ್ತಿದೆ. ಅಲೈಗುಡ್ಡೆಯಲ್ಲಿ ಜೂನ್ 21ರಂದು ಗುಂಪಿನಲ್ಲಿದ್ದ ಬೀದಿನಾಯಿಗಳು ಹೆದ್ದಾರಿ ಮಧ್ಯೆ ಕಚ್ಚಾಡುತ್ತಿದ್ದಾಗ ದ್ವಿಚಕ್ರ ವಾಹನಗಳೆರಡು ಸ್ಕಿಡ್ಡಾಗಿ ರಸ್ತೆಗೆ ಬಿದ್ದು ಸವಾರರು ಗಾಯಗೊಂಡಿದ್ದಾರೆ. ಒಂದೆಡೆ ಮರವೂರು ಸೇತುವೆ ಕುಸಿತಗೊಂಡ ಬಳಿಕ ಗುರುಪುರ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರೆ, ಇನ್ನೊಂದೆಡೆ ಬೀದಿನಾಯಿಗಳ ಕಾಟ ವ್ಯಾಪಕವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಗುರುಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ತಡೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಕರೊನಾ ಲಾಕ್‌ಡೌನ್‌ನಿಂದ ಕ್ರಮ ಸಾಧ್ಯವಾಗಿಲ್ಲ. ನಾಯಿಗಳನ್ನು ಸಂಹರಿಸುವಂತಿಲ್ಲ. ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಬೇಕಾಗುತ್ತದೆ. ಸ್ಥಳೀಯ ಪಶು ಚಿಕಿತ್ಸಾಲಯದ ವೈದ್ಯರಿಗೆ ನೊಟೀಸು ಮಾಡಿ, ಕ್ರಮಕ್ಕೆ ಸೂಚಿಸುತ್ತೇವೆ. ಯಶವಂತ ಕುಮಾರ್ ಶೆಟ್ಟಿಗುರುಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ