ಕಣಸಗಿರಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಗೋ ಶಾಲೆ ನರ‍್ಮಾಣ ಮಾಡಿ, ಆಗಸ್ಟ್ 15 ರಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಉದ್ಘಾಟನೆಯನ್ನೂ ಮಾಡಿದ್ದಾರೆ. ಆದರೆ, ಅದರ ನರ‍್ವಹಣೆಗೆ ಅನುದಾನ ಮಂಜೂರಾಗಿಲ್ಲ. ಹಳಿಯಾಳದಲ್ಲಿ ಪ್ರಾರಂಭವಾದ ರ‍್ಕಾರಿ ಗೋಶಾಲೆಯಲ್ಲಿ ಜಾನುವಾರುಗಳ ಸಂಖ್ಯೆ ಮಿತಿ ಮೀರಿದೆ.
ಪ್ರಾರಂಭವಾಗದ ಗೋ ಶಾಲೆ
ನಗರದ ಬಿಡಾಡಿ ದನಗಳಿಗೆ ಗಂಟು ರೋಗ ಕಾಣಿಸಿಕೊಂಡಿದೆ. ನಾಲ್ಕಕ್ಕೂ ಅಧಿಕ ಹಸುಗಳು ಗಂಟುರೋಗದಿಂದ ಬಳಲುತ್ತಿದ್ದು, ಎಲ್ಲೆಡೆ ಓಡಾಡಿ ಇನ್ನೊಂದು ಹಸುವಿಗೆ ರೋಗ ಹಚ್ಚಿಸುತ್ತಿವೆ. ಕಾಲುಗಳ ನಡುವೆ ಗಾಯವಾಗಿ ಕುಂಟುತ್ತ ಸಾಗುವ ಸಾಕಷ್ಟು ದನಗಳು ನಗರದೆಲ್ಲೆಡೆ ಇವೆ. ಬಿಡಾಡಿ ದನಗಳ ನರ‍್ವಹಣೆ ನಗರಸಭೆಗೆ ಸೇರಿದೆ. ಆದರೆ, ನಗರಸಭೆ ಇವುಗಳ ಬಗ್ಗೆ ನರ‍್ಲಕ್ಷ್ಯ ವಹಿಸಿದೆ. ದನಗಳ ಮಾಲೀಕರು ತಮ್ಮ ದನಗಳನ್ನು ಕಟ್ಟಿಕೊಳ್ಳುವಂತೆ ನಗರಸಭೆ ಒಮ್ಮೆ ನೋಟಿಸ್ ನೀಡಿತು. ನಂತರ ಅವುಗಳನ್ನು ಹಿಡಿದು ಕೊಂಡವಾಡಿಗಳಿಗೆ ಸಾಗಿಸುವ ಗೋಜಿಗೆ ಹೋಗಿಲ್ಲ.
ಗಂಟು ರೋಗ:
ನಗರದ ವಿವಿಧ ರಸ್ತೆಗಳಲ್ಲಿ ರಾತ್ರಿ ಬಿಡಾಡಿ ದನಗಳು ಬೀಡು ಬಿಡುತ್ತವೆ. ರಸ್ತೆಯನ್ನು ಆವರಿಸಿಕೊಂಡು ಮಲಗುತ್ತವೆ. ರಾತ್ರಿ ಕಡಿಮೆ ಬೆಳಕಿನಲ್ಲಿ ತೀರ ಹತ್ತಿರ ಬರುವವರೆಗೂ ದನಗಳು ಮಲಗಿರುವುದು ಕಾಣುವುದಿಲ್ಲ ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಗಾಯಗೊಂಡ ಹಸುಗಳಿಗೆ ಚಿಕಿತ್ಸೆ ನೀಡುವವರಿಲ್ಲ. ಚಿಕಿತ್ಸೆ ನೀಡಲು ಅವುಗಳ ಸುಲಭವಾಗಿ ಕೈಗೆ ಸಿಗುವುದೂ ಇಲ್ಲ. ಇದು, ಕೇವಲ ನಗರದ ರಸ್ತೆಯಲ್ಲಿ ಮಾತ್ರವಲ್ಲ. ಸದಾಶಿವಗಡ-ಕದ್ರಾ ಹೆದ್ದಾರಿಯಲ್ಲಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸದಾಶಿವಗಡ, ಮಾಜಾಳಿ ಭಾಗದಲ್ಲಿ ಈ ಸಮಸ್ಯೆ ಅಧಿಕವಾಗಿದೆ. ಅಪಘಾತದಲ್ಲಿ ಹಸುಗಳು ಗಾಯಗೊಂಡಿದ್ದು, ಮೃತಪಟ್ಟಿದ್ದು, ಮಾತ್ರವಲ್ಲ. ವಾಹನ ಸವಾರರೂ ಮೃತಪಟ್ಟ ಉದಾಹರಣೆಗಳಿವೆ. ಇನ್ನು ವಿವಿಧ ಸಂರ‍್ಭಗಳಲ್ಲಿ ಅವುಗಳ ನಡುವೆ ನಡೆಯುವ ಬೀದಿ ಕಾಳಗದಿಂದ ವಾಹನಗಳು, ಜನಕ್ಕೆ ಹಾನಿಯಾಗುವುದುಂಟು. ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ ರ‍್ರಾಬರ‍್ರಿ ಓಡಾಡಿ ತರಕಾರಿ ಕಸಿಯುವ ದನಗಳು ದೊಣ್ಣೆಯೇಟು ತಿನ್ನುವುದು ಸಾಮಾನ್ಯ.
ಕಾರವಾರ: ದೀಪಾವಳಿಯಲ್ಲಿ ಎಲ್ಲೆಡೆ ಗೋವುಗಳಿಗೆ ಪೂಜೆ ನಡೆಯುತ್ತಿದೆ. ದಂಡೆ ಹಾಕಿ, ಬಾಸಿಂಗ ಕಟ್ಟಿ ಅವುಗಳಿಗೆ ಗೋಗ್ರಾಸ ನೀಡಲಾಗುತ್ತದೆ. ಆದರೆ, ಈ ಹಸುಗಳಿಗೆ ಮಾತ್ರ ದೊಣ್ಣೆಯೇಟೇ ಗತಿಯಾಗಿದೆ. ನಗರದ ವಿವಿಧ ರಸ್ತೆಗಳ ಬಿಡಾಡಿ ದನಗಳ ಸಂಖ್ಯೆ ಹೆಚ್ಚಿದ್ದು, ಅವುಗಳಿಂದ ವಿವಿಧ ಸಮಸ್ಯೆ ಉಂಟಾಗುತ್ತಿದ್ದು, ಜನ ಹಿಡಿ ಶಾಪ ಹಾಕುವಂತಾಗಿದೆ. ಇನ್ನು ಬಿಡಾಡಿ ದನಗಳೂ ಅಪಘಾತಕ್ಕೆ ತುತ್ತಾಗಿ ಗಾಯಗೊಳ್ಳುತ್ತಿವೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಬಂದು ಮಲಗುವ ಬಿಡಾಡಿ ದನಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಅವುಗಳ ಕೋಡಿಗೆ, ಕೊರಳಿಗೆ ರೇಡಿಯಂ ಪಟ್ಟಿ ಅಳವಡಿಸುವಂತೆ ಸೂಚಿಸಲಾಗಿದೆ. ಬಿಡಾಡಿ ದನಗಳನ್ನು ಹಿಡಿದು ಕೊಂಡೆವಾಡೆಗಳಲ್ಲಿ ಕೂಡುವಂತೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಅದೇನಿದ್ದರೂ ತಾತ್ಕಾಲಿಕ ಕ್ರಮವಾಗಿದೆ. ಜನ ತಮ್ಮ ಜಾನುವಾರುಗಳನ್ನು ರಸ್ತೆಯಲ್ಲಿ ಬಿಡದೇ ಅವುಗಳನ್ನು ಕಟ್ಟಿ ಸಾಕಬೇಕು ಎಂಬುದು ನನ್ನ ವಿನಂತಿ.ಪಶು ಸಂಗೋಪನಾ ಇಲಾಖೆ ಉಪ ನರ‍್ದೇಶಕಮೋಹನ ಕುಮಾರ್ ಬಿಡಾಡಿ ನದಗಳಿಗೆ ಗಂಟು ರೋಗ ಬಂದಿದ್ದನ್ನು ಗಮನಿಸಿದ್ದೇವೆ. ಅವುಗಳಿಗೆ ಲಸಿಕೆ ಹಾಕಲು ಅವುಗಳನ್ನು ಹಿಡಿಯುವುದೇ ದೊಡ್ಡ ಸಮಸ್ಯೆಯಾಗಿದೆ. ಬಿಡಾಡಿ ದನಗಳ ನರ‍್ವಹಣೆ ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ನಾವು ಅವುಗಳಿಗೆ ಬೇಕಾದರೂ ಔಷಧ ನೀಡಬಹುದು. ಗೋ ಶಾಲೆಗೆ ಅನುದಾನ ಮಂಜೂರಾಗಿಲ್ಲ ಇದರಿಂದ ಅವುಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ.