ಹಾರಗದ್ದೆಯ ಚನ್ನಕೇಶವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಂಸತಿಕ ಮೇಳದಲ್ಲಿ ಸಾಧಕಿ ಟಿ.ಎಸ್​.ಉಮಾದೇವಿ ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಹಿರಿಯ ಮುಖಂಡ ಎಚ್​.ಎಸ್​.ಬಸವರಾಜು, ಮಾತೃ ಸಂಸ್ಥೆ ಅಧ್ಯ ಪ್ರಕಾಶ್​, ಅಧ್ಯೆ ಅಪರ್ಣಾ ವೇದಮೂರ್ತಿ, ನಿವೃತ್ತ ಐಎಎಸ್​ ಅಧಿಕಾರಿ ಡಾ.ಸೋಮಶೇಖರ್​, ಅಂಬಿಕಾ ಚಂದ್ರಶೇಖರ್​, ಗಂಗಾಂಬಿಕೆ ಮಲ್ಲಿಕಾರ್ಜುನ್​ ಇತರರಿದ್ದರು. 
ಜಿಲ್ಲೆ

ನಿಲ್ಲಲಿ ಮಹಿಳೆ ಮೇಲಿನ ಶೋಷಣೆ

ಆನೇಕಲ್​ : ಹಾರಗದ್ದೆಯ ಚನ್ನಕೇಶವ ಸಮುದಾಯ ಭವನದಲ್ಲಿ ಶ್ರೀ ರಾಜರಾಜೇಶ್ವರಿ ನಗರ್ತ ಮಹಿಳಾ ಸಂ ಹಾಗೂ ಅಯೋಧ್ಯ ನಗರ ಶಿವಾಚಾರ ವೈಶ್ಯ ನಗರ್ತ ವಿದ್ಯಾವರ್ಧಕ ಸಂ ಹಾಗೂ ನಗರ್ತ ಮಹಿಳಾ ಸಂದ ಸಹಯೋಗದಲ್ಲಿ ಭಾನುವಾರ ಸಾಂಸತಿಕ ಮೇಳ 2025 ಆಯೋಜಿಸಲಾಗಿತ್ತು.

ಪ್ರತಿಯೊಬ್ಬರು ಜವಾಬ್ದಾರಿ ಅರಿತು ಸಮಾಜದಲ್ಲಿ ಉತ್ತಮ ಹೆಸರು ಮಾಡಬೇಕು. ಸಮಾಜದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿರುವುದು ಮಾದರಿ ಎನಿಸಿದೆ ಎಂದು ನಾಗಸಂದ್ರ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಮಹಿಳೆಯರು ಎಲ್ಲ ೇತ್ರದಲ್ಲಿ ಸಾಧಿಸುತ್ತಿದ್ದಾರೆ. ಆದರೆ ಇಂದಿಗೂ ಮಹಿಳೆಯರ ಮೇಲಾಗುವ ಶೋಷಣೆ ನಿಂತಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಆದ್ಯತೆ ನೀಡಬೇಕು, ಅವರ ಮೇಲಾಗುವ ದೌರ್ಜನ್ಯ, ಶೋಷಣೆ ನಿಲ್ಲಬೇಕು ಎಂದರು.

ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಕೆ.ಎಸ್​.ನಟರಾಜು ಮಾತನಾಡಿ, ಲಿಂಗಾಯತ ಸಮುದಾಯದಲ್ಲಿ ಅನೇಕ ಪಂಗಡಗಳಿವೆ. ವರ್ತಕ ವೃತ್ತಿ, ಪೂಜೆ ಸೇರಿ ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು. ಸಾಂಸತಿಕ ಮೇಳದಲ್ಲಿ ಹಾರಗದ್ದೆ, ಬೆಂಗಳೂರು, ವಿಜಯಪುರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ,ಯಲಹಂಕ, ಶಿಡ್ಲಟ್ಟ, ಶ್ರೀನಿವಾಸಪುರ, ಆನೇಕಲ್​, ಜಂಗಮಕೋಟೆ, ವೇಮಗಲ್​, ಮಾಲೂರು, ಸೂಲಿಬೆಲೆ ಭಾಗದಿಂದ ಆಗಮಿಸಿದ ಕಲಾತಂಡಗಳು ಯಗಾನ ಕೋಲಾಟ ಸೇರಿ ವಿವಿಧ ಕಾರ್ಯಕ್ರಮ ನೀಡಿ ಗಮನ ಸೆಳೆದವು. ರಶ್ಮಿಮಹೇಶ್​, ಟಿ.ಎಸ್​.ಉಮಾದೇವಿ ಬಸವರಾಜು, ಕೃತಿಕಾ ಭುವನೇಶ್ವರ, ಟಿ.ಎಸ್​.ಉಮಾದೇವಿ ಬಸವರಾಜು, ಎನ್​.ಎನ್​.ಭಾಗ್ಯಾ ನಟರಾಜು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಯೋಜಕ ಕೆ.ಎಸ್​.ನಟರಾಜು, ಎಂ.ಶಂಕರ್​, ಇಂದಿರಾ ಬಸವರಾಜು, ಶೋಭಾ ಪುಟ್ಟರಾಜು ಇದ್ದರು.

ಮಹಿಳೆ ಸ್ವಾವಲಂಬಿ ಆಗಬೇಕಾದರೆ ಸ್ವಯಂ ಉದ್ಯೋಗದತ್ತ ಗಮನಹರಿಸಬೇಕು. ಜವಾಬ್ದಾರಿ ಇಲ್ಲದಿದ್ದರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಬಂದಾಗ ಅಲ್ಲಿನ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. | ಗಂಗಾಂಬಿಕೆ ಮಲ್ಲಿಕಾರ್ಜುನ್​ ಬಿಬಿಎಂಪಿ ಮಾಜಿ ಮೇಯರ್​