ಚಿಂಚೋಳಿ: ಪಟ್ಟಣದ ವಿವಿಧ ಅಂಗಡಿಗೆ ತಾಲೂಕು ಮಟ್ಟದ ಅಧಿಕಾರಿಗಳು ಧಿಡೀರ್ ಭೇಟಿ ನೀಡಿ ಪಟಾಕಿಗಳು ಮಾರಾಟ ಮಾಡಬೇಡಿ ಎಂದು ವ್ಯಾಪಾರಸ್ಥರಿಗೆ ಸೂಚನೆ ನೀಡಿದರು.
ಪಟ್ಟಣದ ಪಾಲಾಮೂರ ಕಿರಾಣಿ ಅಂಗಡಿಯಲ್ಲಿ ಹಳೆಯ ಪಟಾಕಿ ವಶಕ್ಕೆ ಪಡೆದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ, ಪೋಲಿಸ್, ಕಂದಾಯ ಇಲಾಖೆ ಸಹಯೋಗದಲ್ಲಿ ನಂದಿಸುವ ಕಾರ್ಯ ನಡೆಯಿತು. ಸುರಕ್ಷತೆ ದೃಷ್ಟಿಯಿಂದ ಕಿರಾಣಿ ಅಂಗಡಿಗಳಲ್ಲಿ ಪಟಾಕಿ ಮಾರುವಂತಿಲ್ಲ ಎಂದು ಜಾಗೃತಿ ಮೂಡಿಸಿದರು.
ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾಪಂ ಇಓ ಶಂಕರ ರಾಠೋಡ್, ಪಿಎಸ್ಐ ಹಣಮಂತಪ್ಪ ಬಂಕಲಗಿ, ಸಂಜು ಕುಮಾರ್, ಸಂತೋಷ, ರವಿಕುಮಾರ ಚಿಟ್ಟಾ ಸೇರಿದಂತೆ ಅನೇಕರು ಇದ್ದರು.