ಮುಧೋಳ: ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟದ ಮೇಲೆ ನಿಗಾವಹಿಸುವ ಜತೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಗಾಂಜಾ, ಕಳ್ಳಬಟ್ಟಿಯಂತಹ ಅಕ್ರಮ ಚಟುವಟಿಕೆ ಮೇಲೆ ಕಣ್ಣಿಟ್ಟು ಅದನ್ನು ತಡೆಗಟ್ಟಲು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಆಡಳಿತ ಕಚೇರಿಯಲ್ಲಿ ನೂತನ ಅಬಕಾರಿ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ತಹಸೀಲ್ದಾರ್ ಮಹಾದೇವ ಸನಮುರಿ, ತಾಪಂ ಇಒ ಉಮೇಶ ಸಿದ್ನಾಳ, ಜಿಲ್ಲಾ ಅಬಕಾರಿ ಉಪ ಆಯುಕ್ತ ಜಿ.ಎಲ್.ಬನಹಟ್ಟಿ, ಅಬಕಾರಿ ನಿರೀಕ್ಷಕ ರಾಜು ಹೊಸಮನಿ, ಉಪ ನಿರೀಕ್ಷಕ ಚನ್ನಪ್ಪ ಟಕ್ಕಳಕಿ, ಸಾಗರ ಸೂರ್ಯವಂಶಿ, ಸುರೇಶ ಶೆಟ್ಟಿ, ಪ್ರವೀಣಕುಮಾರ ಶೆಟ್ಟಿ , ಚಿನ್ನು ಅಂಬಿ, ಸುರೇಂದ್ರ ಶೆಟ್ಟಿ, ವಿಜಯಕುಮಾರ ಇತರರು ಇದ್ದರು.