ಸಿಂಧನೂರಿನ ಅಬಕಾರಿ ಇಲಾಖೆ ಸಹಾಯಕ ಅಧಿಕಾರಿಗೆ ಮಾದಕ ವ್ಯಸನ ನಿರ್ಮೂಲನಾ ಸಮಿತಿ ಮನವಿ ಸಲ್ಲಿಸಿತು. ಸಮಿತಿ ಸಂಚಾಲಕ ಡಾ.ವಸೀಂ, ಸುರೇಶ ಗೊಬ್ಬರಕಲ್, ದೌಲಸಾಬ್ ದೊಡ್ಡಮನಿ, ಮಂಜುನಾಥ, ಯೂಸೂಫ್ ಇದ್ದರು. 
ಜಿಲ್ಲೆ

ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಿ

ನರೇಶ್ ಕುಮಾರ್

ಸಿಂಧನೂರು: ತಾಲೂಕು ವ್ಯಾಪ್ತಿಯಲ್ಲಿ ಗಾಂಜಾ, ಡ್ರಗ್ಸ್ ಹಾಗೂ ಮದ್ಯ ಅಕ್ರಮ ಮಾರಾಟ ತಡೆಯಬೇಕೆಂದು ಒತ್ತಾಯಿಸಿ ಮಾದಕ ವ್ಯಸನ ನಿರ್ಮೂಲನಾ ಸಮಿತಿಯಿಂದ ಅಬಕಾರಿ ಇಲಾಖೆ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಇತ್ತೀಚೆಗೆ ಗಾಂಜಾ, ಡ್ರಗ್ಸ್ ಸೇರಿದಂತೆ ಅಮಲೇರಿಸುವ ಪದಾರ್ಥಗಳ ಮಾರಾಟ ಜಾಲ ಹಬ್ಬುತ್ತಿದೆ. ಇದರಿಂದ ಯುವಕರು ವ್ಯಸನಿಗಳಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶದ ಕೆಲ ಕ್ಯಾಂಪ್‌ಗಳಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

ನಗರದ ವಾರ್ಡ್‌ವೊಂದರಲ್ಲಿ ಮಾದಕ ವಸ್ತುಗಳು ಮಾರಾಟ ಮಾಡುವ ಜಾಲಗಳು ಇವೆ ಎಂಬ ಬಗ್ಗೆ ಅನುಮಾನಗಳಿವೆ. ಅಂತಾರಾಜ್ಯ ಪೆಡ್ಲರ್‌ಗಳೊಂದಿಗೆ ಲಿಂಕ್ ಹೊಂದಿರುವ ನಗರ ಹಾಗೂ ಗ್ರಾಮೀಣ ಪ ್ರದೇಶದ ಕೆಲವರು, ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದು, ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಮಿತಿ ಸಂಚಾಲಕ ಡಾ.ವಸೀಂ, ಸುರೇಶ ಗೊಬ್ಬರಕಲ್, ದೌಲಸಾಬ್ ದೊಡ್ಡಮನಿ, ಮಂಜುನಾಥ, ಯೂಸೂಫ್ ಇದ್ದರು.