ಜಿಲ್ಲೆ

ಜಿಲ್ಲೆಯಲ್ಲಿ ಐಪಿಎಲ್‌ ಬೆಟ್ಟಿಂಗ್‌ ತಡೆಯಿರಿ ಪೊಲೀಸ್‌ ಇಲಾಖೆಗೆ ಡಿಸಿ ಸೂಚನೆ

Uttara Kannada - Subash Hegde

ಕಾರವಾರ: ಜಿಲ್ಲೆಯಲ್ಲ್ಲಿ ಐ.ಪಿ.ಎಲ್ ಬೆಟ್ಟಿಂಗ್, ಅನಧಿಕೃತ ಲಾಟರಿ, ಮಟ್ಕಾ ಹಾವಳಿಯ ಪ್ರಕರಣಗಳು ನಡೆಯದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿ ನಿಯಂತ್ರಣ ಫೈಯಿಂದ ಸ್ಕ್ವಾಡ್‌ನ 2024-25 ನೇ ಸಾಲಿನ ನಾಲ್ಕನೆಯ ತ್ರೈ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ತ್ರೈ ಮಾಸಿಕದಲ್ಲಿ ಒಟ್ಟು 31 ಮಟ್ಕಾ ಪ್ರಕರಣಗಳಲ್ಲಿ 86 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿರುವ ಬಗ್ಗೆ ಹಾಗೂ ಯಾವುದೇ ಅನಧಿಕೃತ ಲಾಟರಿ ಹಾವಳಿ ಪ್ರಕರಣಗಳು ದಾಖಲಾಗದೇ ಇರುವ ಬಗ್ಗೆ ಮಾಹಿತಿ ಪಡೆದು, ಜಿಲ್ಲೆಯನ್ನು ಸಂಪೂರ್ಣ ಅನಧಿಕೃತ ಲಾಟರಿ/ಮಟ್ಕಾ ಹಾವಳಿ ಮುಕ್ತ ವಲಯವನ್ನಾಗಿ ಮಾಡಲು ಫ್ಲೈಯಿಂದ ಸ್ಕ್ವಾಡ್‌ ಸದಸ್ಯರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಪೋಲಿಸ್ ನಿರೀಕ್ಷಕರಾದ ನಿತ್ಯಾನಂದ ಪಂಡಿತ್, ವಾಣಿಜ್ಯ ತೆರಿಗೆ ಅಧಿಕಾರಿ ಷಣ್ಮುಗಪ್ಪ ನರೇಗಲ್, ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಪಟಗಾರ, ಅಭಿವೃದ್ಧಿ ಅಧಿಕಾರಿ ಕಾಶಿಮಸಾಬ ಮುಲ್ಲಾ, ಶೋಲಿನ್ ಡಿ’ಕೋಸ್ಟಾ, ಮತ್ತಿತರರು ಉಪಸ್ಥಿತರಿದ್ಧರು.