ಜಿಲ್ಲೆ

ಮುಖಚರ್ಯು ಗುರುತಿಸುವ ಕ್ರಮ ನಿಲ್ಲಿಸಲಿ

ದೀಪಕ ತಲವಾಯಿ

ಹಾನಗಲ್ಲ: ಫಲಾನುಭವಿಗಳ ಮುಖಚರ್ಯು ಗುರುತಿಸುವ (ಎಫ್​ಆರ್​ಎಸ್) ಕ್ರಮ ನಿಲ್ಲಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ವತಿಯಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮು ಎರೆಸೀಮೆ ಅವರಿಗೆ ಮನವಿ ಸಲ್ಲಿಸಲಾಯಿತು.

ಎಫ್​ಆರ್​ಎಸ್ ವ್ಯವಸ್ಥೆ ಅಳವಡಿಕೆಯಿಂದ ಕ್ಷೇತ್ರಮಟ್ಟದಲ್ಲಿ ಹಲವಾರು ತೊಂದರೆ ಅನುಭವಿಸುವಂತಾಗಿದೆ.

ಎಫ್​ಆರ್​ಎಸ್ ಅಳವಡಿಕೆ ಮೂಲಕ ಫಲಾನುಭವಿಗಳ ಆಹಾರ ಭದ್ರತೆಯ ಹಕ್ಕು ನಿರಾಕರಿಸುತ್ತಿದೆ. ಎಫ್​ಆರ್​ಎಸ್ ಮೂಲಕ ಸಂಗ್ರಹಿತ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ ವಿಪರೀತವಾಗಿ ಸೈಬರ್ ವಂಚನೆಗಳು ಆಗುತ್ತಿವೆ ಎಂದು ಮನವಿಯಲ್ಲಿ ಹೇಳಲಾಗಿದೆ. ಸಿಐಟಿಯು ತಾಲೂಕಾಧ್ಯಕ್ಷೆ ರಾಜೇಶ್ವರಿ ಹಿರೇಮಠ, ಕಾರ್ಯದರ್ಶಿ ಸಿದ್ದಮ್ಮ ಚೌಟಿ, ಕೋಶಾಧ್ಯಕ್ಷೆ ಸುನೀತಾ ದೊಡ್ಡಮನಿ, ಪದಾಧಿಕಾರಿಗಳಾದ ಮುತ್ತಕ್ಕ ಹರಿಜನ, ಮಂಗಳಾ ಬಡಿಗೇರ, ಅನುರಾಧಾ ಶೇಟ್, ಸರಸ್ವತಿ ಪೂಜಾರ, ಚನ್ನಮ್ಮ ಸಮ್ಮಸಗಿ, ಸವಿತಾ ಮೂಲಿಮನಿ, ರತ್ನಾ ಅಂಗರಗಟ್ಟಿ, ಇತರರಿದ್ದರು.

ಹಾನಗಲ್ಲನಲ್ಲಿ ಗುರುವಾರ ಅಂಗನವಾಡಿ ನೌಕರರು ಎಫ್​ಆರ್​ಎಸ್ ಕ್ರಮ ನಿಲ್ಲಿಸಬೇಕು ಎಂದು ಆಗ್ರಹಿಸಿ ಸಿಡಿಪಿಒ ರಾಮು ಯರೆಸೀಮೆ ಅವರಿಗೆ ಮನವಿ ಸಲ್ಲಿಸಿದರು. ರಾಜೇಶ್ವರಿ ಹಿರೇಮಠ, ಸಿದ್ದಮ್ಮ ಚೌಟಿ, ಸುನೀತಾ ದೊಡ್ಡಮನಿ, ಮುತ್ತಕ್ಕ ಹರಿಜನ, ಮಂಗಳಾ ಬಡಿಗೇರ, ಅನುರಾಧಾ ಶೇಟ್, ಇತರರಿದ್ದರು.