ಜಿಲ್ಲೆ

ಸುರಕ್ಷತಾ ಪ್ರಮಾಣಪತ್ರ ನೀಡುವವರೆಗೆ ಶುಲ್ಕ ವಸೂಲಾತಿ ನಿಲ್ಲಿಸಿ

ಅಂಕೋಲಾ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ (66)ರ ಕಾಮಗಾರಿ ತೀರಾ ಅವೈಜ್ಞಾನಿಕವಾಗಿ ನಿರ್ವಹಿಸಿ, ಅದನ್ನು ಮುಕ್ತಾಯಗೊಳಿಸದೆ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿ, ಸುರಂಗ ಮಾರ್ಗದ ಸುರಕ್ಷತಾ ಪ್ರಮಾಣಪತ್ರ ನೀಡುವವರೆಗೆ ಟೋಲ್​ಗೇಟ್​ನಲ್ಲಿ ಶುಲ್ಕ ವಸೂಲಾತಿ ನಿಲ್ಲಿಸಬೇಕೆಂದು ಶಾಸಕ ಸತೀಶ ಸೈಲ್ ಒತ್ತಾಯಿಸಿದರು.

ತಾಲೂಕಿನ ಹಟ್ಟಿಕೇರಿ ಟೋಲ್​ಗೇಟ್ ಬಳಿ ಮಂಗಳವಾರ ಪ್ರತಿಭಟನೆ ನಡೆಸಿ, ಜನರ ಜತೆ ಆಟವಾಡುತ್ತಿರುವ ಐಆರ್​ಬಿ ಕಂಪನಿಗೆ ಧಿಕ್ಕಾರ ಕೂಗಿ ಅವರು ಮಾತನಾಡಿದರು. ಸರ್ಕಾರ ಈ ಗುತ್ತಿಗೆ ಕಂಪನಿಗೆ ಯಾವ ರೀತಿಯ ಪ್ರಮಾಣಪತ್ರ ನೀಡಿದೆಯೋ ತಿಳಿದಿಲ್ಲ. ಆದರೆ, ಬಿಣಗಾ ಬಳಿ ಇರುವ ಸುರಂಗ ಮಾರ್ಗದ ಸೇಪ್ಟಿ ಫಿಟ್ನೆಸ್ ಪ್ರಮಾಣಪತ್ರ ತರುವವರೆಗೆ ಯಾವುದೇ ಕಾರಣಕ್ಕೂ ಟೋಲ್ ಶುಲ್ಕ ವಸೂಲಿ ಮಾಡುವಂತಿಲ್ಲ. ಐಆರ್​ಬಿ ಕಂಪನಿಯ ಅಧಿಕಾರಿಗಳೊಂದಿಗೆ ಕೆಲ ಹೊತ್ತು ಸಭೆ ನಡೆಸಿ, ಸಾರ್ವಜನಿಕರ ಮುಂದೆ ಭಟ್ಕಳದಿಂದ ಕಾರವಾರದವರೆಗೆ ನಾಗರಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ರ್ಚಚಿಸಿದರು.

ಶಂಭು ಶೆಟ್ಟಿ, ಸುಜಾತಾ ಗಾಂವಕರ, ಗೋಪು ಅಡ್ಲೂರು, ವಿನೋದ ಗಾಂವಕರ, ಮಂಜುಳಾ ವೇರ್ಣೆಕರ, ಮಂಜೇಶ್ವರ ನಾಯಕ, ರಾಘವೇಂದ್ರ ನಾಯಕ, ಪಾಂಡುರಂಗ ಗೌಡ, ಕೆ.ಎಚ್. ಗೌಡ, ಬಿ.ಡಿ. ನಾಯ್ಕ, ಗಣಪತಿ ನಾಯ್ಕ ಮೂಲೆಮನೆ, ಉದಯ ನಾಯಕ, ವಿನೋದ ಬಾಸಗೋಡ, ರಂಜನ ಹಿಚ್ಕಡ, ಉಮೇಶ ನಾಯ್ಕ, ನಿರ್ಮಲಾ ನಾಯಕ, ರಾಮಚಂದ್ರ ನಾಯ್ಕ, ಸುಂದರ ಖಾರ್ವಿ, ಜಗದೀಶ ಖಾರ್ವಿ, ದೇವಿದಾಸ ನಾಯ್ಕ, ಸುನೀಲ ನಾಯ್ಕ ಹೊನ್ನೆಕೇರಿ, ಪ್ರಕಾಶ ಗೌಡ, ಜಯಪ್ರಕಾಶ ನಾಯ್ಕ, ಸುರೇಶ ನಾಯ್ಕ ಅಸ್ಲಗದ್ದೆ, ಪುಟ್ಟು ಬೊಮ್ಮಿಗುಡಿ, ಮಂಜುನಾಥ ನಾಯ್ಕ ಸೇರಿ 500ಕ್ಕೂ ಹೆಚ್ಚು ಪ್ರತಿಭಟನಾಕಾರರು ಇದ್ದರು.