ಮಂಗಳೂರು: ತೊಕ್ಕೊಟ್ಟು ಬಳಿ ಕೊರಗಜ್ಜನ ಕೋಲ ನಡೆಯುತ್ತಿದ್ದ ಸಂದರ್ಭದಲ್ಲಿಅಲ್ಲಿಗಾಗಮಿಸಿದ ಮದ್ಯದ ನಶೆಯಲ್ಲಿದ್ದ ಹಫೀಜ್ ಎಂಬಾತ ಕೋಲ ನಿಲ್ಲಿಸುವಂತೆ ಹೇಳಿ ಪೊಲೀಸ್ ಜೀಪಿಗೆ ಕಲ್ಲೆಸೆದು ದಾಂಧಲೆ ನಡೆಸಿದ್ದಾನೆ.
ಉಳ್ಳಾಲ ಪೊಲೀಸರು ಸಾರ್ವಜನಿಕರ ಸಹಾಯದಿಂದ ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಆತನಿಗೆ ಸಾರ್ವಜನಿಕರು ಎರಡೇಟು ಬಿಗಿದಿದ್ದಾರೆ.