ಜಿಲ್ಲೆ

ಬೋರ್‌ವೆಲ್ ಲಾರಿಗೆ ಕಲ್ಲು ತೂರಾಟ - ನರಿಮೊಗರುವಿನಲ್ಲಿ ಪುಂಡರಿಂದ ಕೃತ್ಯ


ಪುತ್ತೂರು: ನರಿಮೊಗರು ಗ್ರಾಮದ ಮೇಘಾ -ಟ್ಸ್ ಪ್ರೊಸ್ಸೆಸಿಂಗ್ ಕಂಪನಿಯಲ್ಲಿ ಕೊಳವೆಬಾವಿ ಶುದ್ಧೀಕರಣ ವೇಳೆ ಅಕ್ರಮ ಪ್ರವೇಶ ಮಾಡಿದ ಪುಂಡರು ಬೋರ್‌ವೆಲ್ ಯಂತ್ರವನ್ನು ಹೊಂದಿದ ಲಾರಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.


ಮೇ ೨೭ರ ಸಾಯಂಕಾಲ ಸಂಸ್ಥೆಯ ನರಿಮೊಗರು ‘ಬಿಂದು’ ಕಂಪನಿಯ ಆವರಣದಲ್ಲಿ ಕೊಳವೆಬಾವಿಯನ್ನು ಶುದ್ಧೀಕರಿಸುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಸಮದ್ ಮತ್ತು ಸಲೀಂ ಹಾಗೂ ಇತರರು ಸೇರಿಕೊಂಡು ಸಂಸ್ಥೆಯ ಆವರಣದೊಳಗೆ ಅಕ್ರಮ ಪವೇಶ ಮಾಡಿ ಹಲ್ಲೆ ನಡೆಸಿ, ಕಲ್ಲುತೂರಾಟ ಮಾಡಿ ಸ್ವಚ್ಛತೆಗಾಗಿ ಬಂದ ಯಮುನ ಬೋರ್‌ವೆಲ್ ವಾಹನಕ್ಕೆ ಹಾನಿ ಉಂಟುಮಾಡಿರುತ್ತಾರೆ ಎಂದು ಸಂಸ್ಥೆಯ ಮ್ಯಾನೇಜರ್ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಘಟನೆಯಿಂದ ಕಾರ್ಮಿಕರಿಗೂ ಗಾಯವಾಗಿರುತ್ತದೆ. ಕಲ್ಲು ತೂರಾಟ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.