ಸಾಂದರ್ಭಿಕ ಚಿತ್ರ 
ಜಿಲ್ಲೆ

ದೇವರಿಗೆ ಮೊರೆ, ಕಳವಾಗಿದ್ದ ವಾಹನ ಪತ್ತೆ !

Dakshina Kannada

ಉಪ್ಪಿನಂಗಡಿ: ಇಲ್ಲಿನ ಉದ್ಯಮಿಯೊಬ್ಬರ ಮನೆಯಂಗಳದಿಂದ ಕಳವಾಗಿದ್ದ ದ್ವಿಚಕ್ರ ವಾಹನ, ಪತ್ತೆಗಾಗಿ ದೇವರಿಗೆ ಮೊರೆಹೋದ ಬೆನ್ನಲ್ಲಿಯೇ ಕೊಡಗಿನಲ್ಲಿ ಪತ್ತೆಯಾಗಿದೆ.

ಉದ್ಯಮಿ ಸುಂದರ ಗೌಡ ಎಂಬುವರ ದ್ವಿಚಕ್ರ ವಾಹನ ಕಳವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಹಲವು ದಿನಗಳಾದರೂ ವಾಹನ ಪತ್ತೆಯಾಗಿರಲಿಲ್ಲ. ಹೀಗಾಗಿ ಸುಂದರ ಗೌಡ ಉಪ್ಪಿನಂಗಡಿಯ ಶ್ರೀಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

ದೇವಸ್ಥಾನದಿಂದ ಹೊರ ಬರಬೇಕೆನ್ನುವಷ್ಟರಲ್ಲಿ ಕಳವಾದ ವಾಹನ ಕೊಡಗಿನ ಶನಿವಾರಸಂತೆ ಸಮೀಪ ಪತ್ತೆಯಾಗಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿದೆ. ಶನಿವಾರಸಂತೆ ಪರಿಸರದಲ್ಲಿ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಕಳ್ಳ ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ದ್ವಿಚಕ್ರ ವಾಹನವನ್ನು ಉಪ್ಪಿನಂಗಡಿಗೆ ತರಲಾಗಿದೆ.