ಮೂಡುಬಿದಿರೆ: ಆ.19ರಂದು ಕಲ್ಲಮುಂಡ್ಕೂರಿನಲ್ಲಿ ಕಳ್ಳತನವಾಗಿದ್ದ ದನಗಳನ್ನು ವಾರಸುದಾರರಿಗೆ ಪೊಲೀಸರು ಹುಡುಕಿಕೊಟ್ಟಿದ್ದಾರೆ. ಕಲ್ಲಮುಂಡ್ಯೂರು ಬಲರಾಮ ಅವರ ಎರಡು ದನಗಳನ್ನು ಆ.19ರಂದು ರಾತ್ರಿ ಮುಸುಕುಧಾರಿಗಳು ಕಳವುಗೈದಿದ್ದರು. ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದ್ದು, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಕಾರ್ಯಪ್ರವೃತ್ತರಾದರು. ದನಗಳು ಅಡ್ಡೂರಿನಲ್ಲಿರುವುದು ಗೊತ್ತಾಗಿ ಅಲ್ಲಿಗೆ ಹೋಗಿ ಪರಿಶೀಲಿಸಿದಾಗ, ಕಳವಾದ ದನಗಳು ಎಂದು ಸ್ಪಷ್ಟವಾಯಿತು. ದನಕಳ್ಳರು ಅಡ್ಡೂರಿನ ವ್ಯಾಪಾರಿಯೊಬ್ಬರಿಗೆ ಅವುಗಳನ್ನು ಮಾರಾಟ ಮಾಡಿದ್ದರು.