ಜಿಲ್ಲೆ

ಆನ್‌ಲೈನ್‌ನಲ್ಲಿ ಷೇರು ವ್ಯವಹಾರ, 33 ಲಕ್ಷ ರೂ. ಕಳೆದುಕೊಂಡ ಮಹಿಳೆ

ಮೈಸೂರು: ಆನ್‌ಲೈನ್‌ನಲ್ಲಿ ಷೇರು ವ್ಯವಹಾರ ಮಾಡಲು ಹೋದ ಮಹಿಳೆ ನಕಲಿ ಕಂಪನಿಯಿಂದ ವಂಚನೆಗೆ ಒಳಗಾಗಿದ್ದು, 33 ಲಕ್ಷ ರೂ. ಕಳೆದುಕೊಂಡಿದ್ದಾರೆ.
ನಗರದ ನಿವೇದಿತನಗರದ ಎಚ್.ಪಿ.ಮಹಾಲಕ್ಷ್ಮಿ ಹಣ ಕಳೆದುಕೊಂಡವರು. ಷೇರು ವ್ಯವಹಾರ ನಡೆಸುತ್ತಿದ್ದ ಮಹಾಲಕ್ಷ್ಮೀ ಅವರು ಆನ್‌ಲೈನ್ ಮೂಲಕ ಕಂಪನಿಯೊಂದರ ಸಿಬ್ಬಂದಿ ಹೇಳಿದಂತೆ ಹಣ ಹೂಡಿಕೆ ಮಾಡಿದ್ದರು. ಬಳಿಕ ಹಂತ, ಹಂತವಾಗಿ ನಕಲಿ ಕಂಪನಿಯ ಅಕೌಂಟ್‌ಗೆ 33,11,164 ರೂ. ವರ್ಗಾಯಿಸಿದ್ದಾರೆ. ಸಾಕಷ್ಟು ದಿನ ಕಾದರೂ ಅವರಿಗೆ ಯಾವುದೇ ಹಣ ವಾಸಪ್ ಬಾರದಿದ್ದರಿಂದ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಮಹಾಲಕ್ಷ್ಮೀ ಅವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.