ಬೆಳಗಾವಿ: ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ, ತೋಗರಿ ಬೆಳೆ ಹಾಗೂ ಉದ್ದಿನ ಬೆಳೆ ದರವನ್ನು ಅಗತ್ಯ ವಸ್ತುಗಳ ಕಾಯ್ದೆ 1955ರ ಹಾಗೂ ಕರ್ನಾಟಕ ಸರ್ಕಾರದ ತಿದ್ದುಪಡಿ ಅಗತ್ಯ ವಸ್ತುಗಳ ಲಾಯನ್ಸ್‌ಸಿಂಗ್ ಆದೇಶ 1986ರಡಿ ಗೋಧಿಗೆ ಸಂಬಂಧಿಸಿದಂತೆ, ಸಗಟು ವ್ಯಾಪಾರಸ್ಥರಿಗೆ 3000 ಮೆ.ಟನ್ ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ 10 ಮೆ.ಟನ್ ಹಾಗೂ ತೋಗರಿ ಮತ್ತು ಉದ್ದಿನ ಬೆಳೆಗೆ ಸಂಬಂಧಿಸಿದಂತೆ ಸಗಟು ವ್ಯಾಪಾರಸ್ಥರಿಗೆ 200 ಮೆ.ಟನ್ ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ 5 ಮೆ.ಟನ್ ಈ ರೀತಿ ನಮೂದಿಸಿದ ಆದೇಶದಲ್ಲಿ ದಾಸ್ತಾನು ಮಿತಿ ವಿಧಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಸಗಟು, ಕಿರುಕುಳ ಹಾಗೂ ಗೋಧಿ ಪ್ಲೋರ್ ಮೀಲ್ ವ್ಯಾಪಾರಸ್ಥರು ಸದರಿ ದಾಸ್ತಾನು ಮಿತಿಗೆ ಒಳಪಟ್ಟು ದಾಸ್ತಾನನ್ನು ನಿರ್ವಹಿಸತಕ್ಕದ್ದು. ಇದನ್ನು ಹೊರತು ಪಡಿಸಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಮತ್ತು ಹೆಚ್ಚಿನ ದಾಸ್ತಾನು ನಿರ್ವಹಿಸಿದ್ದಲ್ಲಿ ನಿಯಮಾನುಸಾರದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಸದರಿ ದಾಸ್ತಾನು ಮಿತಿಯನ್ನು ಗೋಧಿಗೆ ಸಂಬಂಧಿಸಿದಂತೆ 2024ರ ಮಾ.31 ರವರೆಗೆ ಹಾಗೂ ತೋಗರಿ ಮತ್ತು ಉದ್ದಿನ ಬೆಳೆಗೆ ಸಂಬಂಧಿಸಿದಂತೆ 2023ರ ಅ31ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.